ನಿಮ್ಮ ಖಾತೆಯನ್ನು ಹೇಗೆ ಅಳಿಸುವುದು
ನೀವು WhatsApp ನಿಂದ ನಿಮ್ಮ ಖಾತೆಯನ್ನು ಅಳಿಸಬಹುದು. ನಿಮ್ಮ ಖಾತೆಯನ್ನು ಅಳಿಸುವುದು ಒಂದು ಹಿಂಪಡೆಯಲಾಗದ ಪ್ರಕ್ರಿಯೆಯಾಗಿದೆ, ಇದು ನಿಮ್ಮಿಂದ ಆಕಸ್ಮಿಕವಾಗಿ ಆಗಿದ್ದರೂ ಸಹ ನಾವು ಅದನ್ನು ಹಿಂಪಡೆಯಲು ಸಾಧ್ಯವಿಲ್ಲ.
ನಿಮ್ಮ ಖಾತೆಯನ್ನು ಅಳಿಸಲು
- WhatsApp ತೆರೆಯಿರಿ.
- ಸೆಟ್ಟಿಂಗ್ಸ್ > ಖಾತೆ > ನನ್ನ ಖಾತೆ ಅಳಿಸಿ ಗೆ ಹೋಗಿ.
- ನಿಮ್ಮ ಫೋನ್ ಸಂಖ್ಯೆಯನ್ನು ಪೂರ್ಣ ಅಂತರಾಷ್ಟ್ರೀಯ ಸ್ವರೂಪದಲ್ಲಿ ನಮೂದಿಸಿ ಮತ್ತು ನನ್ನ ಖಾತೆ ಅಳಿಸಿ ಟ್ಯಾಪ್ ಮಾಡಿ.
ನಿಮ್ಮ ಖಾತೆಯನ್ನು ಅಳಿಸುವುದರಿಂದ:
- ನಿಮ್ಮ ಖಾತೆ ಮಾಹಿತಿ ಮತ್ತು ಪ್ರೊಫೈಲ್ ಫೋಟೋ ಅಳಿಸುತ್ತದೆ.
- ನಿಮ್ಮನ್ನು ಎಲ್ಲಾ WhatsApp ಗ್ರೂಪ್‌ಗಳಿಂದ ಅಳಿಸುತ್ತದೆ.
- ನಿಮ್ಮ ಹಳೆಯ WhatsApp ಮೆಸೇಜ್ ಬ್ಯಾಕಪ್ ಅಳಿಸುತ್ತದೆ.
ನೀವು ನಿಮ್ಮ ಖಾತೆಯನ್ನು ಅಳಿಸಿದರೆ:
- ನೀವು ನಿಮ್ಮ ಖಾತೆಗೆ ಪುನಃ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
- ನಿಮ್ಮ WhatsApp ಮಾಹಿತಿಯನ್ನು ಅಳಿಸಲು ಅದರ ಅಳಿಸುವ ಪ್ರಕ್ರಿಯೆಯ ಆರಂಭದಿಂದ 90 ದಿನಗಳವರೆಗಿನ ಸಮಯ ತೆಗೆದುಕೊಳ್ಳಬಹುದು. ನೈಸರ್ಗಿಕ ವಿಕೋಪ, ಸಾಫ್ಟ್‌ವೇರ್ ದೋಷ ಅಥವಾ ಡೇಟಾ ನಷ್ಟವಾಗುವಂತಹ ಇತರ ಸಂದರ್ಭದಲ್ಲಿ ರಿಕವರ್‌ಗಾಗಿ ನಾವು ಬಳಸುವ ಬ್ಯಾಕಪ್ ಸ್ಟೋರೇಜ್‍ನಲ್ಲಿ 90 ದಿನಗಳ ನಂತರವೂ ನಿಮ್ಮ ಮಾಹಿತಿಯ ಪ್ರತಿಗಳು ನಮ್ಮಲ್ಲಿ ಉಳಿಯಬಹುದು. ಈ ಸಂದರ್ಭದಲ್ಲಿ ನಿಮಗೆ WhatsAppನಲ್ಲಿ ನಿಮ್ಮ ಮಾಹಿತಿಯು ಲಭ್ಯವಿರುವುದಿಲ್ಲ.
- ನೀವು ರಚಿಸಿದ ಗ್ರೂಪ್‌ಗಳಿಗೆ ಸಂಬಂಧಪಟ್ಟಂತಹ ಇತರ ಮಾಹಿತಿ ಅಥವಾ ನಿಮಗೆ ಸಂಬಂಧಿಸಿದಂತೆ ಇತರ ಬಳಕೆದಾರು ಹೊಂದಿರುವಂತಹ ಮಾಹಿತಿಯ ಮೇಲೆ ಇದು ಪರಿಣಾಮ ಬೀರುವುದಿಲ್ಲ, ಉದಾಹರಣೆಗೆ ನೀವು ಅವರಿಗೆ ಕಳುಹಿಸಿದ ಮೆಸೇಜ್‌ಗಳ ಪ್ರತಿಗಳು.
- ರೆಕಾರ್ಡ್‌ಗಳ ಸಂಗ್ರಹಣೆಯಂತಹ ಸಂದರ್ಭದಲ್ಲಿ ಕೆಲವು ವಿಷಯಗಳ ಪ್ರತಿಗಳು ನಮ್ಮ ಡೇಟಾಬೇಸ್‌ನಲ್ಲಿ ಉಳಿಯಬಹುದು. ಆದರೆ ಅವುಗಳನ್ನು ವೈಯಕ್ತಿಕವಾಗಿ ಗುರುತಿಸಲು ಸಾಧ್ಯವಾಗದಂತೆ ಪ್ರತ್ಯೇಕಿಸಲಾಗಿರುತ್ತದೆ.
- ಕಾನೂನು ವಿಚಾರಗಳು, ನಿಯಮಗಳ ಉಲ್ಲಂಘನೆ ಅಥವಾ ಹಾನಿ ತಡೆಗಟ್ಟುವ ಪ್ರಯತ್ನಗಳಂತಹ ಪ್ರಕ್ರಿಯೆಗಾಗಿ ನಿಮ್ಮ ಮಾಹಿತಿಯನ್ನು ನಾವು ಇರಿಸಿಕೊಳ್ಳಬಹುದು.
- ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಗೌಪ್ಯತಾ ನೀತಿಯಲ್ಲಿನ ಕಾನೂನು ಮತ್ತು ಸುರಕ್ಷತೆ ವಿಭಾಗವನ್ನು ನೋಡಿ.
- ಇತರ Facebook ಕಂಪನಿಗಳೊಂದಿಗೆ ಶೇರ್ ಮಾಡಿದ ನಿಮ್ಮ ಮಾಹಿತಿಯನ್ನು ಸಹ ಅಳಿಸಲಾಗುತ್ತದೆ.
ಸಂಬಂಧಿತ ಸಂಪನ್ಮೂಲಗಳು:
ನಿಮ್ಮ ಖಾತೆಯನ್ನು ಇವುಗಳಲ್ಲಿ ಹೇಗೆ ಅಳಿಸುವುದು ಎಂದು ತಿಳಿಯಿರಿ: Android | KaiOS