ನಿಮಗೆ ಅನುಕೂಲವಾದಾಗ ಬದಲಾವಣೆಗಳನ್ನು ಪರಿಶೀಲಿಸುವುದಕ್ಕಾಗಿ ಸಾಕಷ್ಟು ಸಮಯವನ್ನು ನಿಮಗೆ ನೀಡಲು ನಾವು ಜಾರಿಗೆ ಬರುವ ದಿನಾಂಕವನ್ನು ಮೇ 15 ಕ್ಕೆ ಮುಂದೂಡಿದ್ದೇವೆ. ಅಷ್ಟರೊಳಗೆ ನೀವು ಸಮ್ಮತಿಸದಿದ್ದಲ್ಲಿ, ನಿಮ್ಮ ಖಾತೆಯನ್ನು WhatsApp ಅಳಿಸುವುದಿಲ್ಲ. ಆದಾಗ್ಯೂ, ನೀವು ಸಮ್ಮತಿಸುವವರೆಗೂ WhatsApp ನ ಸಂಪೂರ್ಣ ಸೌಲಭ್ಯವನ್ನು ಬಳಸಲು ನಿಮಗೆ ಸಾಧ್ಯವಾಗುವುದಿಲ್ಲ. ಸ್ವಲ್ಪ ಸಮಯದವೆರೆಗೆ ನೀವು ಕಾಲ್‌ಗಳನ್ನು ಮತ್ತು ನೊಟಿಫಿಕೇಷನ್‌ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಆದರೆ ಆ್ಯಪ್‍ನಿಂದ ಮೆಸೇಜ್‌ಗಳನ್ನು ಓದಲು ಹಾಗೂ ಕಳುಹಿಸಲು ಸಾಧ್ಯವಾಗುವುದಿಲ್ಲ.
ನಿಮಗೆ ಈ ಕೆಳಗಿನ ಆಯ್ಕೆಗಳಿವೆ:
- ನೀವು ಮೇ 15 ರ ನಂತರವೂ ಸಹ ಅಪ್‌ಡೇಟ್‌ಗಳನ್ನು ಸಮ್ಮತಿಸಬಹುದು.
- ಮೇ 15 ರ ಮೊದಲು, ನೀವು ನಿಮ್ಮ ಹಳೆಯ ಚಾಟ್ ಅನ್ನು Android ಅಥವಾ iPhone ಗೆ ಎಕ್ಸ್‌ಪೋರ್ಟ್ ಮಾಡಿಕೊಳ್ಳಬಹುದು ಮತ್ತು ನಿಮ್ಮ ಖಾತೆಯ ವರದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. Android, iPhone, ಅಥವಾ KaiOS ನಲ್ಲಿ ನಿಮ್ಮ ಖಾತೆಯನ್ನು ಅಳಿಸಲು ನೀವು ಬಯಸಿದರೆ, ನಿಮ್ಮ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ಇದು ನಿಮ್ಮ ಹಳೆಯ ಮೆಸೇಜ್‌ಗಳನ್ನು ಅಳಿಸುತ್ತದೆ, ನಿಮ್ಮನ್ನು ಎಲ್ಲಾ WhatsApp ಗ್ರೂಪ್‌ಗಳಿಂದ ತೆಗೆದುಹಾಕುತ್ತದೆ ಮತ್ತು ನಿಮ್ಮ WhatsApp ಬ್ಯಾಕಪ್‌ಗಳನ್ನು ಅಳಿಸುತ್ತದೆ. ಹೀಗಾಗಿ ಅದನ್ನು ನಾವು ಮರಳಿಸಲು ಸಾಧ್ಯವಾಗದು.
- ನಿಮ್ಮ ಖಾತೆಯ ವರದಿಯನ್ನು ಡೌನ್‌ಲೋಡ್ ಮಾಡಲು ಅಥವಾ ನಿಮ್ಮ ಖಾತೆಯನ್ನು ಅಳಿಸಲು ನಿಮಗೆ ಯಾವುದೇ ಸಹಾಯ ಬೇಕಾದಲ್ಲಿ, ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು. ಪ್ರತ್ಯೇಕವಾಗಿ, ನಿಷ್ಕ್ರಿಯ ಬಳಕೆದಾರರಿಗೆ ಸಂಬಂಧಿಸಿದ ನಮ್ಮ ನೀತಿ ಅನ್ವಯಿಸುತ್ತದೆ.