ನಾವು ನಮ್ಮ ಸೇವಾ ನಿಯಮಗಳು ಮತ್ತು ಗೌಪ್ಯತಾ ನೀತಿಯನ್ನು ಅಪ್‌ಡೇಟ್ ಮಾಡುತ್ತಿದ್ದೇವೆ
WhatsApp ನಲ್ಲಿ ಬ್ಯುಸಿನೆಸ್‌ಗಳು ಮತ್ತು ಗ್ರಾಹಕರ ನಡುವೆ ಮೆಸೇಜ್ ವಿನಿಮಯಕ್ಕೆ ಸಂಬಂಧಿಸಿದಂತೆ ನಮ್ಮ ಸೇವಾ ನಿಯಮಗಳು ಮತ್ತು ಗೌಪ್ಯತಾ ನೀತಿಯಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಡೇಟಾವನ್ನು ಹೇಗೆ ಸಂಗ್ರಹಿಸುತ್ತೇವೆ, ಶೇರ್ ಮಾಡುತ್ತೇವೆ ಹಾಗೂ ಬಳಸುತ್ತೇವೆ ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ಸಹ ನೀಡುತ್ತಿದ್ದೇವೆ.
ನಿಮ್ಮ ಗೌಪ್ಯತೆಗೆ ನಮ್ಮ ಬದ್ಧತೆಯು ಬದಲಾಗದು. ನಿಮ್ಮ ವೈಯಕ್ತಿಕ ಸಂಭಾಷಣೆಗಳನ್ನು ಈಗಲೂ ಕೊನೆಯಿಂದ-ಕೊನೆಯವರೆಗಿನ ಎನ್‌ಕ್ರಿಪ್ಷನ್‍ನಿಂದ ರಕ್ಷಿಸಲಾಗುತ್ತಿದೆ. ಅಂದರೆ, ನಿಮ್ಮ ಚಾಟ್‌ಗಳನ್ನು WhatsApp ಅಥವಾ Facebook ಸೇರಿದಂತೆ, ಹೊರಗಿನ ಯಾರೂ ಸಹ ಓದಲು ಅಥವಾ ಕೇಳಲು ಸಾಧ್ಯವಿಲ್ಲ.
ಈ ಅಪ್‌ಡೇಟ್‌ಗಳ ಕುರಿತಾಗಿ ಸ್ಪಷ್ಟವಾದ ವಿವರಣೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ:
ಯಾವುದು ಬದಲಾಗುತ್ತಿದೆ ?

ಫೋನ್ ಅಥವಾ ಇಮೇಲ್‌ಗೆ ಹೋಲಿಸಿದರೆ, WhatsApp ನಲ್ಲಿ ಬೇಗ ಕೆಲಸ ಪೂರೈಸಿಕೊಳ್ಳಲು ನಿಮಗೆ ಹೆಚ್ಚು ಬ್ಯುಸಿನೆಸ್‌ಗಳೊಂದಿಗೆ ಮಾತನಾಡಲು ಸಾಧ್ಯವಾಗುತ್ತದೆ. ಇದು ಸಂಪೂರ್ಣವಾಗಿ ಐಚ್ಛಿಕವಾಗಿದೆ.
ಪ್ರತಿದಿನ, ಲಕ್ಷಾಂತರ ಜನರು WhatsApp ಬಳಸಿ ದೊಡ್ಡ ಮತ್ತು ಸಣ್ಣ ಬ್ಯುಸಿನೆಸ್‌ಗಳೊಂದಿಗೆ ಸಂವಹನ ನಡೆಸುತ್ತಾರೆ. ಪ್ರಶ್ನೆಗಳನ್ನು ಕೇಳಲು, ಖರೀದಿ ಮಾಡಲು ಮತ್ತು ಮಾಹಿತಿಯನ್ನು ಪಡೆಯಲು ನೀವು ಬ್ಯುಸಿನೆಸ್‌ಗಳಿಗೆ ಮೆಸೇಜ್ ಮಾಡಬಹುದು. ನೀವು WhatsApp ನಲ್ಲಿ ಬ್ಯುಸಿನೆಸ್‌ಗಳೊಂದಿಗೆ ಚಾಟ್ ಮಾಡಬೇಕೇ ಬೇಡವೇ ಎಂಬುದು ನಿಮ್ಮದೇ ಆಯ್ಕೆಯಾಗಿದ್ದು, ನೀವು ಅವರನ್ನು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಿಂದ ಬ್ಲಾಕ್ ಮಾಡಬಹುದು ಅಥವಾ ತೆಗೆದುಹಾಕಬಹುದು.
ಏರ್‌ಲೈನ್ ಅಥವಾ ರಿಟೇಲರ್‌ನಂತಹ ದೊಡ್ಡ ಬ್ಯುಸಿನೆಸ್‌ಗಳು ಒಂದೇ ಸಮಯದಲ್ಲಿ ಸಾವಿರಾರು ಗ್ರಾಹಕರಿಂದ ಪ್ರಶ್ನೆಗಳನ್ನು ಸ್ವೀಕರಿಸಬಹುದು. ಅದು ಫ್ಲೈಟ್‌ಗೆ ಸಂಬಂಧಿಸಿದ ಮಾಹಿತಿಯಾಗಿರಬಹುದು ಅಥವಾ ಅವರ ಆರ್ಡರ್‌ಗಳನ್ನು ಟ್ರ್ಯಾಕ್ ಮಾಡಲು ಪ್ರಯತ್ನಿಸುವುದೂ ಆಗಿರಬಹುದು. ಶೀಘ್ರವಾಗಿ ಪ್ರತಿಕ್ರಿಯಿಸುವುದಕ್ಕಾಗಿ ಈ ಬ್ಯುಸಿನೆಸ್‌ಗಳು Facebook ಅನ್ನು ತಂತ್ರಜ್ಞಾನ ಪೂರೈಕೆದಾತರನ್ನಾಗಿ ಬಳಸಿಕೊಂಡು ತಮ್ಮ ಪರವಾಗಿ ಕೆಲವು ಪ್ರತಿಕ್ರಿಯೆಗಳನ್ನು ನಿರ್ವಹಿಸುವಂತೆ ಮಾಡಬಹುದು. ಇಂತಹ ಸಂದರ್ಭದಲ್ಲಿ, ನಿಮಗೆ ಅದನ್ನು ತಿಳಿಸಲು ಚಾಟ್‌ಗಳನ್ನು ಸ್ಪಷ್ಟವಾಗಿ ಲೇಬಲ್ ಮಾಡುತ್ತೇವೆ.

ಡೇಟಾವನ್ನು ಹೇಗೆ ಸಂಗ್ರಹಿಸುತ್ತೇವೆ, ಶೇರ್ ಮಾಡುತ್ತೇವೆ ಹಾಗೂ ಬಳಸುತ್ತೇವೆ ಎಂಬುದರ ಕುರಿತಾಗಿ ಹೆಚ್ಚಿನ ಸ್ಪಷ್ಟತೆಯನ್ನು ನೀಡುತ್ತಿದ್ದೇವೆ.
ನಮ್ಮ ಗೌಪ್ಯತಾ ನೀತಿಯಲ್ಲಿನ ಬದಲಾವಣೆಗಳು ನಿಮ್ಮ ಮಾಹಿತಿಯನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ನಿಮಗೆ ನೀಡುತ್ತವೆ. ನಮ್ಮ ಗೌಪ್ಯತಾ ನೀತಿಯಲ್ಲಿನ ಕೆಲವು ವಿಭಾಗಗಳಿಗೆ ಹೆಚ್ಚಿನ ವಿವರಗಳನ್ನು ಹಾಗೂ ಹೊಸ ವಿಭಾಗಗಳನ್ನು ಸೇರಿಸಿದ್ದೇವೆ. ನಾವು ಗೌಪ್ಯತಾ ನೀತಿಯ ವಿನ್ಯಾಸವನ್ನು ಕೂಡ ಸರಳೀಕರಿಸಿದ್ದೇವೆ ಮತ್ತು ಬಳಕೆದಾರರಿಗೆ ನ್ಯಾವಿಗೇಟ್ ಮಾಡಲು ಅದನ್ನು ಸುಲಭಗೊಳಿಸಿದ್ದೇವೆ.
ನಿಮ್ಮ WhatsApp ಖಾತೆ ಮಾಹಿತಿ ಮತ್ತು ಸೆಟ್ಟಿಂಗ್ಸ್ ವರದಿಯನ್ನು ನೀವು ಇಲ್ಲಿ ಡೌನ್‌ಲೋಡ್ ಮಾಡಬಹುದು.
ಏನು ಬದಲಾಗುತ್ತಿಲ್ಲ

ಕುಟುಂಬ ಮತ್ತು ಸ್ನೇಹಿತರೊಂದಿಗಿನ ನಿಮ್ಮ ವೈಯಕ್ತಿಕ ಚಾಟ್‌ಗಳ ಗೌಪ್ಯತೆ ಮತ್ತು ಸುರಕ್ಷತೆಯು ಎಂದಿಗೂ ಬದಲಾಗುವುದಿಲ್ಲ.
ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನೀವು ಶೇರ್ ಮಾಡಿಕೊಳ್ಳುವ ವಿಷಯಗಳಾದ ನಿಮ್ಮ ವೈಯಕ್ತಿಕ ಮೆಸೇಜ್‍ಗಳು ಮತ್ತು ಕಾಲ್‌ಗಳು, ನೀವು ಶೇರ್ ಮಾಡುವ ಅಟ್ಯಾಚ್‌ಮೆಂಟ್‍ಗಳು ಅಥವಾ ನೀವು ಕಳುಹಿಸುವ ಲೊಕೇಶನ್‌ಗಳನ್ನು WhatsApp ಆಗಲೀ ಅಥವಾ Facebook ಆಗಲೀ ನೋಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಯಾರ್‍ಯಾರೊಂದಿಗೆ ಮೆಸೇಜ್ ವಿನಿಮಯ ಮಾಡುತ್ತಾರೆ ಅಥವಾ ಕರೆ ಮಾಡುತ್ತಾರೆ ಎಂಬ ವಿವರವನ್ನು ನಾವು ಇರಿಸಿಕೊಳ್ಳುವುದಿಲ್ಲ ಹಾಗೂ ನಿಮ್ಮ ಕಾಂಟ್ಯಾಕ್ಟ್‌ಗಳನ್ನು Facebook ಜೊತೆ ಶೇರ್ ಮಾಡುವುದಿಲ್ಲ

ನಿಯಂತ್ರಣ ನಿಮ್ಮ ಕೈಯಲ್ಲೇ ಇದೆ. ನಿಮ್ಮ ಫೋನ್ ನಂಬರ್ ಅನ್ನು ಬ್ಯುಸಿನೆಸ್‌ನೊಂದಿಗೆ ಶೇರ್ ಮಾಡುತ್ತೀರೋ ಇಲ್ಲವೋ ಎಂಬುದು ನಿಮ್ಮ ಆಯ್ಕೆಗೆ ಬಿಟ್ಟದ್ದು ಹಾಗೂ ನೀವು ಯಾವುದೇ ಸಮಯದಲ್ಲಿ ಬ್ಯುಸಿನೆಸ್ ಅನ್ನು ಬ್ಲಾಕ್ ಮಾಡಬಹುದು.
WhatsApp ನಿಮ್ಮ ನಂಬರ್ ಅನ್ನು ಬ್ಯುಸಿನೆಸ್‌ಗಳಿಗೆ ನೀಡುವುದಿಲ್ಲ ಹಾಗೂ ಮೊದಲೇ ನಿಮ್ಮ ಅನುಮತಿ ಪಡೆಯದೇ ನಿಮ್ಮನ್ನು ಸಂಪರ್ಕಿಸಲು ಬ್ಯುಸಿನೆಸ್‌ಗಳಿಗೆ ನಮ್ಮ ನೀತಿಗಳು ಅವಕಾಶ ನೀಡುವುದಿಲ್ಲ.
ನಮ್ಮ ಹೆಚ್ಚುವರಿ ಗೌಪ್ಯತೆ ವೈಶಿಷ್ಟ್ಯಗಳಾದ ನಿಮ್ಮ ಮೆಸೇಜ್‌ಗಳನ್ನು ಅದೃಶ್ಯವಾಗುವಂತೆ ಸೆಟ್ ಮಾಡುವುದು ಅಥವಾ ಯಾರು ನಿಮ್ಮನ್ನು ಗ್ರೂಪ್‌ಗಳಿಗೆ ಸೇರಿಸಬಹುದು ಎಂಬುದನ್ನು ನಿಯಂತ್ರಿಸುವುದು ನಿಮಗೆ ಹೆಚ್ಚುವರಿ ಗೌಪ್ಯತೆಯನ್ನು ಒದಗಿಸುತ್ತದೆ.

ಹೊಸ ಸೇವೆ ನಿಯಮಗಳನ್ನು ನೀವು ಸಮ್ಮತಿಸುವುದರಿಂದ, ತನ್ನ ಮೂಲ ಕಂಪನಿ Facebook ಜೊತೆಗೆ ಬಳಕೆದಾರರ ಡೇಟಾ ಹಂಚಿಕೊಳ್ಳುವ WhatsApp ಸಾಮರ್ಥ್ಯವು ಹೆಚ್ಚಳವಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ಪರಿಶೀಲಿಸಿ. ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ನೀವು ಉತ್ತರಗಳನ್ನು ಸಹ ಇಲ್ಲಿ ನೋಡಬಹುದು.