WhatsApp ಮುಖ್ಯ ಪೇಜ್WhatsApp ಮುಖ್ಯ ಪೇಜ್ಸಹಾಯ ಕೇಂದ್ರ
WHATSAPP WEB
ಫೀಚರ್‌ಗಳು
ಡೌನ್‌ಲೋಡ್‌
ಸುರಕ್ಷತೆ
ಸಹಾಯ ಕೇಂದ್ರ

ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ

  • azərbaycan

  • Afrikaans

  • Bahasa Indonesia

  • Melayu

  • català

  • čeština

  • dansk

  • Deutsch

  • eesti

  • English

  • español

  • français

  • Gaeilge

  • hrvatski

  • italiano

  • Kiswahili

  • latviešu

  • lietuvių

  • magyar

  • Nederlands

  • norsk bokmål

  • o‘zbek

  • Filipino

  • polski

  • Português (Brasil)

  • Português (Portugal)

  • română

  • shqip

  • slovenčina

  • slovenščina

  • suomi

  • svenska

  • Tiếng Việt

  • Türkçe

  • Ελληνικά

  • български

  • қазақ тілі

  • македонски

  • русский

  • српски

  • українська

  • עברית

  • العربية

  • فارسی

  • اردو

  • বাংলা

  • हिन्दी

  • ગુજરાતી

  • ಕನ್ನಡ

  • मराठी

  • ਪੰਜਾਬੀ

  • தமிழ்

  • తెలుగు

  • മലയാളം

  • ไทย

  • 简体中文

  • 繁體中文(台灣)

  • 繁體中文(香港)

  • 日本語

  • 한국어

  • ಡೌನ್‌ಲೋಡ್ ಮಾಡಿ

  • ಫೀಚರ್‌ಗಳು

  • ಭದ್ರತೆ

  • ಸಹಾಯ ಕೇಂದ್ರ

  • ಸಂಪರ್ಕಿಸಿ

ನಾವು ನಿಮಗೆ ಹೇಗೆ ಸಹಾಯ ಮಾಡಬಹುದು?

ನೀವು ನೋಡಲು ಬಯಸುತ್ತಿರುವ ವಿಷಯಗಳನ್ನು ಕಾಣಲು ನೀವು ಕೆಳಗೆ ಬ್ರೌಸ್ ಮಾಡಬಹುದು.
  1. ಸಾಮಾನ್ಯ
  2. ಭದ್ರತೆ ಮತ್ತು ಗೌಪ್ಯತೆ

ನಾವು Facebook ಕಂಪನಿಗಳ ಜೊತೆ ಕೆಲಸ ಮಾಡುವ ರೀತಿ

This article has been archived. Please see up-to-date content in our Privacy Policy.

ಈ ಲೇಖನದಲ್ಲಿ, ನಾವು ಯುರೋಪಿಯನ್ ವಲಯದ ನಮ್ಮ ಬಳಕೆದಾರರಿಗೆ ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತಿದ್ದೇವೆ.

Facebook ಕಂಪನಿಗಳು ಯಾವುವು?

Facebook ಕಂಪನಿಗಳಲ್ಲಿ WhatsApp ಕೂಡಾ ಒಂದಾಗಿದೆ. Facebook ಕಂಪನಿಗಳಲ್ಲಿ Facebook, Facebook Technologies ಮತ್ತು WhatsApp ಕೂಡ ಸೇರಿವೆ. ಅವು ಒಟ್ಟಾಗಿ Facebook ಕಂಪನಿ ಪ್ರಾಡಕ್ಟ್‌ಗಳನ್ನು ಒದಗಿಸುತ್ತವೆ.

Facebook ಕಂಪನಿಗಳ ಜೊತೆ WhatsApp ಯಾಕೆ ಮಾಹಿತಿ ಹಂಚಿಕೊಳ್ಳುತ್ತದೆ?

WhatsApp ಅನ್ನು ಒದಗಿಸಲು ಮತ್ತು ಅದನ್ನು ಅಭಿವೃದ್ಧಿಪಡಿಸಲು‍ ನಮಗೆ ನೆರವಾಗುವ ಮತ್ತು WhatsApp ಹಾಗೂ ಇತರ Facebook ಕಂಪನಿಗಳನ್ನು ಸುರಕ್ಷಿತವಾಗಿ ಮತ್ತು ಭದ್ರವಾಗಿರಿಸಲು ಸಹಾಯಮಾಡುವ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಸಿಸ್ಟಂಗಳಂತಹ ಸೇವೆಗಳನ್ನು ಸ್ವೀಕರಿಸಲು ಇತರ Facebook ಕಂಪನಿಗಳೊಂದಿಗೆ WhatsApp ಕೆಲಸ ಮಾಡುತ್ತದೆ ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ನಾವು Facebook ಕಂಪನಿಗಳಿಂದ ಸೇವೆಗಳನ್ನು ಸ್ವೀಕರಿಸಿದಾಗ, ನಾವು ಅವರೊಂದಿಗೆ ಹಂಚಿಕೊಳ್ಳುವ ಮಾಹಿತಿಯನ್ನು ನಮ್ಮ ಸೂಚನೆಗಳಿಗೆ ಅನುಗುಣವಾಗಿ WhatsApp ಗೆ ಸಹಾಯ ಮಾಡಲು ಬಳಸಲಾಗುತ್ತದೆ. ಒಟ್ಟಾಗಿ ಕೆಲಸಮಾಡುವುದರಿಂದ ನಮಗೆ ಈ ರೀತಿಯ ಅವಕಾಶಗಳು ಒದಗಿಸುತ್ತವೆ. ಉದಾಹರಣೆಗೆ:

  • ಜಗತ್ತಿನಾದ್ಯಂತ ನಿಮಗೆ ವೇಗದ ಮತ್ತು ವಿಶ್ವಾಸಾರ್ಹ ಮೆಸೇಜಿಂಗ್ ಮತ್ತು ಕರೆಗಳ ವ್ಯವಸ್ಥೆಯನ್ನು ಒದಗಿಸಲು ಮತ್ತು ನಮ್ಮ ಸೇವೆಗಳು ಮತ್ತು ಸೌಲಭ್ಯಗಳು ಹೇಗೆ ಕಾರ್ಯಾಚರಿಸುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು.

  • ಎಲ್ಲ WhatsApp ಮತ್ತು Facebook ಕಂಪನಿ ಪ್ರಾಡಕ್ಟ್‌ಗಳಲ್ಲಿ ಸ್ಪ್ಯಾಮ್ ಖಾತೆಗಳನ್ನು ತೆಗೆದುಹಾಕುವುದು ಮತ್ತು ದುರ್ಬಳಕೆ ಮಾಡುವ ಚಟುವಟಿಕೆಗಳನ್ನು ಹತ್ತಿಕ್ಕುವ ಮೂಲಕ ಸುರಕ್ಷಿತ, ಸುಭದ್ರ ಮತ್ತು ಪ್ರಾಮಾಣಿಕ ಸೇವೆಯನ್ನು ಖಚಿತಪಡಿಸುವುದು.

  • ನಿಮ್ಮ WhatsApp ಅನುಭವವನ್ನು Facebook ಕಂಪನಿ ಪ್ರಾಡಕ್ಟ್‌ಗಳ ಜೊತೆ ಸಂಪರ್ಕಿಸುವುದು.

ಇಂದು, ನಿಮ್ಮ Facebook ಪ್ರಾಡಕ್ಟ್ ಅನುಭವಗಳನ್ನು ಸುಧಾರಿಸುವುದಕ್ಕಾಗಲೀ ಅಥವಾ ನಿಮಗೆ Facebook ನಲ್ಲಿ ಹೆಚ್ಚು ಪ್ರಸ್ತುತವೆನ್ನಿಸುವ Facebook ಜಾಹೀರಾತು ಅನುಭವವನ್ನು ನೀಡುವುದಕ್ಕಾಗಲೀ ನಿಮ್ಮ WhatsApp ಖಾತೆ ಮಾಹಿತಿಯನ್ನು Facebook ಬಳಸುತ್ತಿಲ್ಲ. ನಾವು ನಿಮ್ಮ WhatsApp ಮತ್ತು ನೀವು ಬಳಸುವ ಇತರ Facebook ಕಂಪನಿ ಪ್ರಾಡಕ್ಟ್‌ಗಳ ನಿಮ್ಮ ಅನುಭವವನ್ನು ಸುಧಾರಿಸಲು ಸದಾ ಕಾರ್ಯನಿರತರಾಗಿರುತ್ತೇವೆ. ನಾವು ಒದಗಿಸುವ ಹೊಸ ಅನುಭವಗಳ ಬಗ್ಗೆ ಮತ್ತು ನಮ್ಮ ಡೇಟಾ ಕಾರ್ಯವಿಧಾನಗಳ ಬಗ್ಗೆ ನಿಮಗೆ ಸದಾ ತಿಳಿಸುತ್ತಿರುತ್ತೇವೆ.

WhatsApp ಯಾವ ಮಾಹಿತಿಯನ್ನು Facebook ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತದೆ?

Facebook ಕಂಪನಿಗಳಿಂದ ಸೇವೆಯನ್ನು ಪಡೆಯಲು, ಗೌಪ್ಯತಾ ನೀತಿ ವಿಭಾಗದಲ್ಲಿ "ನಾವು ಸಂಗ್ರಹಿಸುವ ಮಾಹಿತಿ” ಎಂಬಲ್ಲಿ ವಿವರಿಸಲಾಗಿರುವಂತೆ ನಾವು ಹೊಂದಿರುವ ನಿಮ್ಮ ಮಾಹಿತಿಯನ್ನು WhatsApp ಹಂಚಿಕೊಳ್ಳುತ್ತದೆ. ಉದಾಹರಣೆಗೆ, WhatsApp ಗೆ ಅನಾಲಿಟಿಕಲ್ ಸೇವೆಗಳನ್ನು ಒದಗಿಸಲು, ನೀವು WhatsApp ಗೆ ಸೈನ್ ಅಪ್ ಮಾಡಿದಾಗ ನೀವು ಪರಿಶೀಲನೆಗೆ ಒದಗಿಸಿದ ಫೋನ್ ನಂಬರನ್ನು, ನಿಮ್ಮ ಸಾಧನದ ಕೆಲವು ಮಾಹಿತಿಗಳನ್ನು (ಅದೇ ಸಾಧನ ಅಥವಾ ಖಾತೆಯ ಜೊತೆ ಸಂಬಂಧಿತವಾದ ನಿಮ್ಮ ಸಾಧನದ ಗುರುತುಕಾರಕಗಳು, ಆಪರೇಟಿಂಗ್ ಸಿಸ್ಟಮ್‍ನ ಆವೃತ್ತಿ, ಆ್ಯಪ್ ಆವೃತ್ತಿ, ಪ್ಲಾಟ್‌ಫಾರ್ಮ್ ಮಾಹಿತಿ, ನಿಮ್ಮ ಮೊಬೈಲ್‌ನ ದೇಶದ ಕೋಡ್ ಮತ್ತು ನೆಟ್‌ವರ್ಕ್ ಕೋಡ್, ಮತ್ತು ನವೀಕರಣಗಳ ಸ್ವೀಕಾರ ಮತ್ತು ನಿಯಂತ್ರಣ ಆಯ್ಕೆಗಳ ಟ್ರ್ಯಾಕಿಂಗ್ ಅನ್ನು ಸಕ್ರಿಯಗೊಳಿಸಲು ಫ್ಲ್ಯಾಗ್‌ಗಳು), ನಿಮ್ಮ ಕೆಲವು ಬಳಕೆ ಮಾಹಿತಿ (WhatsApp ಅನ್ನು ನೀವು ಕೊನೆಯ ಬಾರಿಗೆ ಬಳಸಿದ್ದು ಯಾವಾಗ, ನೀವು ನಿಮ್ಮ ಖಾತೆಯನ್ನು ಮೊದಲ ಬಾರಿಗೆ ನೋಂದಾಯಿಸಿದ್ದು ಯಾವಾಗ, ನೀವು ಬಳಸುವ ಸೌಲಭ್ಯಗಳ ವಿಧ ಮತ್ತು ಆವರ್ತ)ಗಳನ್ನು WhatsApp ನ ಪರವಾಗಿ ಮತ್ತು ನಮ್ಮ ಸೂಚನೆಗಳಿಗೆ ಅನುಗುಣವಾಗಿ Facebook ಸಂಸ್ಕರಿಸುತ್ತದೆ.

Facebook ಕಂಪನಿಗಳಾದ್ಯಂತ ಸುರಕ್ಷತೆ, ಭದ್ರತೆ ಮತ್ತು ಪ್ರಾಮಾಣಿಕತೆಗಳನ್ನು ಪ್ರೋತ್ಸಾಹಿಸುವ ಉದ್ದೇಶಕ್ಕಾಗಿ ಅಗತ್ಯಬಿದ್ದಾಗ WhatsApp ಮಾಹಿತಿಗಳನ್ನು ಇತರ Facebook ಕಂಪನಿಗಳ ಜೊತೆ ಹಂಚಿಕೊಳ್ಳಬಹುದು. ಇದರಲ್ಲಿ Facebook ಮತ್ತು ಇತರ Facebook ಕಂಪನಿಗಳಿಗೆ ಒಬ್ಬರು ನಿರ್ದಿಷ್ಟ WhatsApp ಬಳಕೆದಾರ Facebook ಕಂಪನಿಯ ಪ್ರಾಡಕ್ಟ್‌ಗಳನ್ನು ಬಳಸುತ್ತಿದ್ದಾರೆಯೇ ಎಂದು ಕಂಡುಕೊಳ್ಳಲು ಮತ್ತು ಬೇರೆ Facebook ಕಂಪನಿಗಳು ಅಂತಹ ಬಳಕೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆ ಅಥವಾ ಅವರನ್ನು ಸಂರಕ್ಷಿಸಬೇಕೆ ಎಂದು ತೀರ್ಮಾನಿಸಲು ಅನುಕೂಲವಾಗುವ ಮಾಹಿತಿಗಳನ್ನು ಹಂಚಿಕೊಳ್ಳುವುದೂ ಸೇರಿದೆ. ಉದಾಹರಣೆಗೆ, Facebook ನಲ್ಲಿ ಸ್ಪ್ಯಾಮರ್ ಎಂದು ಗುರುತಿಸಲಾಗಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು Facebook ಗೆ ಸಹಾಯ ಮಾಡುವ, ಘಟನೆ(ಗಳು) ಮಾತ್ರವಲ್ಲದೆ ಅವರು WhatsApp ಗೆ ಸೈನ್ ಅಪ್ ಮಾಡಿದಾಗ ಪರಿಶೀಲನೆಗೆ ಒದಗಿಸಿದ ಫೋನ್ ನಂಬರ್‌ನಂತಹ ಮಾಹಿತಿಯನ್ನು ಅಥವಾ ಅದೇ ಸಾಧನ ಅಥವಾ ಖಾತೆಗೆ ಸಂಬಂಧಿಸಿದ ಸಾಧನವನ್ನು ಗುರುತಿಸುವುದಕ್ಕೆ ಅಗತ್ಯವಿರುವ ಮಾಹಿತಿಯನ್ನು WhatsApp ಹಂಚಿಕೊಳ್ಳಬಹುದು. ಈ ರೀತಿಯ ಯಾವುದೇ ವರ್ಗಾವಣೆಗಳು ನಮ್ಮ ಗೌಪ್ಯತಾ ನೀತಿ ವಿಭಾಗದಲ್ಲಿ ಹೇಳಲಾಗಿರುವ “ಡೇಟಾ ಸಂಸ್ಕರಣೆಗೆ ನಮ್ಮ ಕಾನೂನು ತಳಹದಿ”ಗೆ ಆನುಗುಣವಾಗಿಯೇ ನಡೆಯುತ್ತದೆ.

Facebook ಕಂಪನಿಗಳು ನನ್ನ WhatsApp ಮಾಹಿತಿಯನ್ನು ಹೇಗೆ ಬಳಸುತ್ತವೆ?

  • ಕಾರ್ಯಾಚರಿಸಲು, ಸುಧಾರಿಸಲು ಮತ್ತು ನಮ್ಮ ಬ್ಯುಸಿನೆಸ್ ಅನ್ನು ಅಭಿವೃದ್ಧಿಪಡಿಸಲು WhatsApp ಗೆ ಸಹಾಯ ಮಾಡುವ ಸೇವೆಗಳನ್ನು ಸ್ವೀಕರಿಸುವುದಕ್ಕಾಗಿ. WhatsApp ಮಾಹಿತಿಯನ್ನು Facebook ಕಂಪನಿಗಳ ಜೊತೆ ಈ ರೀತಿಯಾಗಿ ಹಂಚಿಕೊಂಡಾಗ, Facebook ಕಂಪನಿಗಳು ಸೇವಾದಾತರಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ನಾವು ಅವರೊಂದಿಗೆ ಹಂಚಿಕೊಂಡ ಮಾಹಿತಿಯನ್ನು ನಮ್ಮ ಸೂಚನೆಗೆ ಅನುಗುಣವಾಗಿ WhatsApp ಗೆ ಸಹಾಯ ಮಾಡಲು ಬಳಸುತ್ತವೆ.

    • ನಾವು ಬೇರೆ Facebook ಕಂಪನಿಗಳೊಂದಿಗೆ ಸೇವಾದಾತರ ಜೊತೆ ಹಂಚಿಕೊಳ್ಳುವಂತೆ ಮಾಹಿತಿ ಹಂಚಿಕೊಳ್ಳುತ್ತೇವೆ. WhatsApp ನಂತಹ ಕಂಪನಿಗಳಿಗೆ ಮೂಲ ಸೌಕರ್ಯ, ತಂತ್ರಜ್ಞಾನಗಳು, ಸಿಸ್ಟಮ್‌ಗಳು, ಉಪಕರಣಗಳು, ಮಾಹಿತಿ ಮತ್ತು ನಮ್ಮ ಬಳಕೆದಾರರಿಗೆ WhatsApp ಸೇವೆಯನ್ನು ಸುಧಾರಿಸಲು ಸಹಾಯ ಮಾಡುವುದಕ್ಕೆ ಅಗತ್ಯವಿರುವ ಪರಿಣತಿಯನ್ನು ಸೇವಾದಾತರು ಒದಗಿಸುತ್ತಾರೆ.

    • ಉದಾಹರಣೆಗೆ, ಇದು ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತಿದೆ, ಬೇರೆ Facebook ಕಂಪನಿಗಳ ಬಳಕೆಗೆ ಹೋಲಿಸಿದಾಗ ಇದು ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ನಮಗೆ ಅವಕಾಶ ಮಾಡಿಕೊಡುತ್ತದೆ. ಬೇರೆ Facebook ಕಂಪನಿಗಳ ಜೊತೆ ನೀವು WhatsApp ಗೆ ಸೈನ್ ಅಪ್ ಮಾಡಿದಾಗ ಪರಿಶೀಲನೆಗೆ ನೀಡಿದ ಫೋನ್ ನಂಬರ್ ಮತ್ತು ನೀವು ಕೊನೆಯ ಬಾರಿಗೆ ನಿಮ್ಮ ಖಾತೆಯನ್ನು ಬಳಸಿದ್ದು ಯಾವಾಗ ಎಂಬಂತಹ ಮಾಹಿತಿ ಹಂಚಿಕೊಳ್ಳುವ ಮೂಲಕ, ನಾವು ಒಂದು ನಿರ್ದಿಷ್ಟ WhatsApp ಖಾತೆಯು Facebook ಕಂಪನಿಗಳ ಇನ್ನೊಂದು ಸೇವೆಯನ್ನು ಕೂಡ ಬಳಸುವ ಒಬ್ಬ ವ್ಯಕ್ತಿಗೆ ಸೇರಿದ್ದೇ ಅಲ್ಲವೇ ಎಂಬುದನ್ನು ತಿಳಿಯಲು ನಮಗೆ ಸಾಧ್ಯವಾಗುತ್ತದೆ. ಇದು ನಮ್ಮ ಸೇವೆಗಳ ಕುರಿತು ಹೆಚ್ಚು ನಿಖರವಾಗಿ ಮಾಹಿತಿಯನ್ನು ವರದಿಮಾಡಲು ಮತ್ತು ನಮ್ಮ ಸೇವೆಗಳನ್ನು ಸುಧಾರಿಸಿಕೊಳ್ಳಲು ನಮಗೆ ಅವಕಾಶ ಮಾಡಿಕೊಡುತ್ತದೆ. ಹಾಗಾಗಿ, ಉದಾಹರಣೆಗೆ, ಬೇರೆ Facebook ಕಂಪನಿಗಳ ಆ್ಯಪ್‌ಗಳು ಅಥವಾ ಸೇವೆಗಳ ಬಳಕೆಗೆ ಹೋಲಿಸಿದರೆ WhatsApp ಅನ್ನು ಜನ ಹೇಗೆ ಬಳಕೆ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಆ ಮೂಲಕ, ಸಂಭಾವ್ಯ ಸೌಲಭ್ಯಗಳನ್ನು ಅಥವಾ ಪ್ರಾಡಕ್ಟ್ ಸುಧಾರಣೆಗಳನ್ನು ಅನ್ವೇಷಿಸಲು ಇದು WhatsApp ಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ನಮ್ಮ ಯಾವೆಲ್ಲ ಬಳಕೆದಾರರು ಬೇರಾವುದೇ Facebook ಆ್ಯಪ್‌ಗಳನ್ನು ಬಳಸುತ್ತಿಲ್ಲ ಎಂಬುದನ್ನು ಖಚಿತಗೊಳಿಸುವ ಮೂಲಕ ಮತ್ತು Facebook ಕಂಪನಿಗಳಾದ್ಯಂತ ಎಷ್ಟು ಮಂದಿ ಅನನ್ಯ ಬಳಕೆದಾರರಿದ್ದಾರೆ ಎಂಬುದನ್ನು ತಿಳಿಯುವ ಮೂಲಕ, WhatsApp ಎಷ್ಟು ಮಂದಿ ಅನನ್ಯ ಬಳಕೆದಾರರನ್ನು ಹೊಂದಿದೆ ಎಂಬುದನ್ನು ನಾವು ಲೆಕ್ಕಹಾಕಿಕೊಳ್ಳಬಹುದು. ಇದು ನಮ್ಮ ಸೇವೆಗಳ ಚಟುವಟಿಕೆಗಳನ್ನು ನಮ್ಮ ಹೂಡಿಕೆದಾರರು ಮತ್ತು ನಿಯಂತ್ರಕರು ಸೇರಿದಂತೆ ಸಂಬಂಧಿತರಿಗೆ ಇನ್ನಷ್ಟು ಪರಿಪೂರ್ಣವಾಗಿ ವರದಿ ಮಾಡಲು WhatsApp ಗೆ ಸಹಾಯ ಮಾಡುತ್ತದೆ.

    • WhatsApp ನಲ್ಲಿ ಸುಸ್ಥಿರ ಬ್ಯುಸಿನೆಸ್ ಅನ್ನು ಕಟ್ಟುವ ನಮ್ಮ ಹಾದಿಗಳ ಅನ್ವೇಷಣೆಗೂ ಇದು ಸಹಾಯ ಮಾಡುತ್ತದೆ. ಉದಾಹರಣೆಗೆ, ನಾವು ಈ ಹಿಂದೆ ಪ್ರಕಟಿಸಿರುವಂತೆ, ಜನರು ಮತ್ತು ಬ್ಯುಸಿನೆಸ್‌ಗಳು WhatsApp ಬಳಸಿ ಸಂವಹನ ನಡೆಸುವ ಸಾಧ್ಯತೆಗಳನ್ನು ನಾವು ಅನ್ವೇಷಿಸುತ್ತಿದ್ದೇವೆ, ಇದರಲ್ಲಿ ಬೇರೆ Facebook ಕಂಪನಿಗಳ ಜೊತೆ ಸೇರಿ ಜನರಿಗೆ ಅವರು ಆಸಕ್ತರಾಗಿರುವ ಬ್ಯುಸಿನೆಸ್‌ಗಳನ್ನು ಹುಡುಕಲು ಸಹಾಯ ಮಾಡುವುದು ಮತ್ತು ಅವರಿಗೆ WhatsApp ಮೂಲಕ ಸಂವಹನ ನಡೆಸಲು ಸಹಾಯ ಮಾಡುವುದು ಸೇರಿರಬಹುದು. ಈ ಮೂಲಕ, ಬಳಕೆದಾರರು Facebook ಮೂಲಕ ಕಂಡುಕೊಂಡ ಬ್ಯುಸಿನೆಸ್‌ಗಳ ಜೊತೆ WhatsApp ಮೂಲಕ ಸಂವಹನ ನಡೆಸಲು Facebook ತನ್ನ ಬಳಕೆದಾರರಿಗೆ ಅವಕಾಶ ಮಾಡಿಕೊಡಬಹುದು.

  • WhatsApp ಮತ್ತು ಇತರ Facebook ಕುಟುಂಬದ ಸೇವೆಗಳನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿರಿಸಲು.

    • ನಾವು ಬೇರೆ Facebook ಕಂಪನಿಗಳ ಜೊತೆ ಮಾಹಿತಿಯನ್ನು ನಮ್ಮ ಗೌಪ್ಯತಾ ನೀತಿ ವಿಭಾಗದಲ್ಲಿ “ಡೇಟಾ ಸಂಸ್ಕರಣೆಗೆ ಕಾನೂನು ತಳಹದಿ”ಯಲ್ಲಿ ಹೇಳಲಾಗಿರುವ ರೀತಿಯಲ್ಲೇ ಹಂಚಿಕೊಳ್ಳುತ್ತೇವೆ ಮತ್ತು ಅದರ ಜೊತೆಗೆ ನಮ್ಮ ಸೇವೆಗಳಲ್ಲಿ ಸ್ಪ್ಯಾಮ್ ಮತ್ತು ಅಪಬಳಕೆಗಳ ವಿರುದ್ಧ ಹೋರಾಡುವುದಕ್ಕೆ ಸಹಾಯ ಮಾಡಲು, ಅವುಗಳನ್ನು ನಮ್ಮ ಸೇವೆಗಳ ಒಳಗೆ ಮತ್ತು ಹೊರಗೆ ಸುರಕ್ಷಿತವಾಗಿ, ಸುಭದ್ರವಾಗಿ, ಮತ್ತು ಪ್ರಾಮಾಣಿಕವಾಗಿರಿಸಲು ಸಹಾಯ ಮಾಡುತ್ತೇವೆ. ಹಾಗಾಗಿ, ಉದಾಹರಣೆಗೆ, Facebook ಕಂಪನಿಗಳ ಯಾವುದೇ ಸದಸ್ಯರು ಯಾರಾದರೂ ಅದರ ಸೇವೆಗಳನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆಂದು ಕಂಡುಕೊಂಡರೆ, ಅದು ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಬೇರೆ Facebook ಕಂಪನಿಗಳಿಗೆ ಈ ಬಗ್ಗೆ ಮಾಹಿತಿ ನೀಡಬಹುದು ಮತ್ತು ಆ ಮೂಲಕ ಅವರೂ ಅಂತಹದೇ ಕ್ರಮ ಕೈಗೊಳ್ಳುವುದನ್ನು ಪರಿಶೀಲಿಸಲು ಅನುವು ಮಾಡಿಕೊಡಬಹುದು. ಈ ಮೂಲಕ, ನಾವು ಈಗಾಗಲೇ ನಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿರುವರೆಂದು ಅಥವಾ ನಮ್ಮ ಬಳಕೆದಾರರ ಅಥವಾ ಇತರರ ಸುರಕ್ಷತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರುವರೆಂದು ಮತ್ತು ನಮ್ಮ ಕಂಪನಿಗಳ ಕುಟುಂಬದ ಇತರ ಸದಸ್ಯರಿಗೆ ಈ ಕುರಿತು ಎಚ್ಚರಿಕೆ ಕೊಡಬೇಕಾಗಿರುವ ಸ್ಥಿತಿಯಲ್ಲಿರುವರೆಂದು ಈ ಮೊದಲೇ ಗುರುತಿಸಲಾಗಿರುವ ಬಳಕೆದಾರರಿಗೆ ಸಂಬಂಧಿಸಿದಂತೆ ಈ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ.

    • WhatsApp ಮತ್ತು ಇತರ Facebook ಕಂಪನಿಗಳ ಸೇವೆಗಳನ್ನು ಸುರಕ್ಷಿತ ಮತ್ತು ಸುಭದ್ರವಾಗಿಡಲು, Facebook ಕಂಪನಿಗಳಾದ್ಯಂತ ಯಾವೆಲ್ಲ ಖಾತೆಗಳು ಒಬ್ಬರು ನಿರ್ದಿಷ್ಟ ಬಳಕೆದಾರರಿಗೆ ಸೇರಿದವೆಂದು ಅರ್ಥಮಾಡಿಕೊಂಡಿರುವುದು ಅಗತ್ಯವಿರುತ್ತದೆ, ಆಗ ನಮಗೆ ನಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿರುವರೆಂದು ಅಥವಾ ನಮ್ಮ ಬಳಕೆದಾರರ ಅಥವಾ ಇತರರ ಸುರಕ್ಷೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರುವರೆಂದು ಗುರುತಿಸಲಾಗಿರುವ ಬಳಕೆದಾರರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

  • ನಾವು Facebook ನಲ್ಲಿ Facebook ಪ್ರಾಡಕ್ಟ್‌ಗಳ ಸುಧಾರಣೆಗೆ ಮತ್ತು ಹೆಚ್ಚು ಪ್ರಸ್ತುತವೆನ್ನಿಸುವ Facebook ಜಾಹೀರಾತು ಅನುಭವವನ್ನು ಒದಗಿಸಲು ಡೇಟಾ ಹಂಚಿಕೊಳ್ಳುವುದಿಲ್ಲ..

    • ಇಂದು, ನಿಮ್ಮ Facebook ಪ್ರಾಡಕ್ಟ್ ಅನುಭವಗಳನ್ನು ಸುಧಾರಿಸುವುದಕ್ಕಾಗಲೀ ಅಥವಾ ನಿಮಗೆ Facebook ನಲ್ಲಿ ಹೆಚ್ಚು ಪ್ರಸ್ತುತವೆನ್ನಿಸುವ Facebook ಜಾಹೀರಾತು ಅನುಭವವನ್ನು ನೀಡುವುದಕ್ಕಾಗಲೀ ನಿಮ್ಮ WhatsApp ಖಾತೆ ಮಾಹಿತಿಯನ್ನು Facebook ಬಳಸುತ್ತಿಲ್ಲ. Irish Data Protection Commission ಮತ್ತು ಯುರೋಪಿನ ಇತರ ಡೇಟಾ ಸಂರಕ್ಷಣಾ ಪ್ರಾಧಿಕಾರಗಳ ಜೊತೆ ಚರ್ಚೆಗಳ ಫಲಿತಾಂಶ ಇದು. ನಾವು ನಿಮ್ಮ WhatsApp ಮತ್ತು ನೀವು ಬಳಸುವ ಇತರ Facebook ಕಂಪನಿ ಪ್ರಾಡಕ್ಟ್‌ಗಳ ನಿಮ್ಮ ಅನುಭವವನ್ನು ಸುಧಾರಿಸಲು ಸದಾ ಕಾರ್ಯನಿರತರಾಗಿರುತ್ತೇವೆ. ಭವಿಷ್ಯದಲ್ಲಿ, ಈ ಉದ್ದೇಶಕ್ಕಾಗಿ ನಾವು Facebook ಕಂಪನಿಗಳ ಜೊತೆ ಈ ರೀತಿಯ ಡೇಟಾವನ್ನು ಹಂಚಿಕೊಳ್ಳಲು ನಿರ್ಧರಿಸಿದರೆ, ನಾವು ಅಂತಹ ಬಳಕೆಗೆ ಅನುವು ಮಾಡಿಕೊಡುವ ಭವಿಷ್ಯದ ತಾಂತ್ರಿಕತೆಯ ಬಗ್ಗೆ Irish Data Protection Commission ಜೊತೆ ಚರ್ಚಿಸಿ ತೀರ್ಮಾನಕ್ಕೆ ತಲುಪಿದ ಬಳಿಕವೇ ಅದನ್ನು ಕಾರ್ಯರೂಪಕ್ಕೆ ತರುತ್ತೇವೆ. ನಾವು ಒದಗಿಸುವ ಹೊಸ ಅನುಭವಗಳು ಮತ್ತು ನಮ್ಮ ಹೊಸ ಮಾಹಿತಿ ವಿಧಾನಗಳ ಬಗ್ಗೆ ನಿಮಗೆ ತಿಳಿಸುತ್ತಲೇ ಇರುತ್ತೇವೆ.

ಈ ಉದ್ದೇಶಗಳಿಗಾಗಿ ಯಾರ WhatsApp ಮಾಹಿತಿಯನ್ನು Facebook ಕಂಪನಿಗಳ ಜೊತೆ ಹಂಚಿಕೊಳ್ಳಲಾಗುತ್ತದೆ?

ನಮ್ಮ ಸೇವೆಗಳನ್ನು ಬಳಸಲು ಆಯ್ಕೆ ಮಾಡಿಕೊಂಡಿರುವ ಎಲ್ಲ WhatsApp ಬಳಕೆದಾರರ ಮಾಹಿತಿಯನ್ನೂ ನಾವು ಹಂಚಿಕೊಳ್ಳುತ್ತೇವೆ. ಇದರಲ್ಲಿ Facebook ಬಳಕೆದಾರರಲ್ಲದಿರುವ WhatsApp ಬಳಕೆದಾರರೂ ಕೂಡ ಸೇರಿರಬಹುದು. ಏಕೆಂದರೆ, Facebook ಕಂಪನಿಗಳಿಂದ ಮೌಲ್ಯಯುತ ಸೇವೆಯನ್ನು ಪಡೆಯಲು ಮತ್ತು ಈ ಲೇಖನದಲ್ಲಿ ನಮ್ಮ ಗೌಪ್ಯತಾ ನೀತಿಯಲ್ಲಿ ವಿವರಿಸಲಾಗಿರುವ ಮುಖ್ಯ ಉದ್ದೇಶಗಳನ್ನು ಸಾಧಿಸಿಕೊಳ್ಳಲು, ಅಗತ್ಯಬಿದ್ದರೆ ನಾವು ಎಲ್ಲ ಬಳಕೆದಾರರ ಮಾಹಿತಿಯನ್ನೂ ಹಂಚಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕಾಗುತ್ತದೆ.

ಎಲ್ಲ ಸಂದರ್ಭಗಳಲ್ಲಿ, ಈ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಅಗತ್ಯವಿರುವ ಕನಿಷ್ಟ ಪ್ರಮಾಣದ ಮಾಹಿತಿಯನ್ನು ಮಾತ್ರ ನಾವು ಹಂಚಿಕೊಳ್ಳುತ್ತೇವೆ. ನಾವು ಹಂಚಿಕೊಂಡಿರುವ ಮಾಹಿತಿ ಇತ್ತೀಚಿನದೆಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ಹಾಗಾಗಿ ನೀವು ನಿಮ್ಮ WhatsApp ಫೋನ್ ನಂಬರನ್ನು ಅಪ್‌ಡೇಟ್ ಮಾಡಿದರೆ, ಉದಾಹರಣೆಗೆ, ನಮ್ಮಿಂದ ಅದನ್ನು ಸ್ವೀಕರಿಸಿರುವ Facebook ಕುಟುಂಬದ ಸದಸ್ಯರು ಕೂಡ ಆ ನಂಬರನ್ನು ಅಪ್‌ಡೇಟ್ ಮಾಡಿಕೊಳ್ಳುತ್ತಾರೆ.

ಮುಖ್ಯವಾಗಿ, ನಿಮ್ಮ WhatsApp ಸಂಪರ್ಕಗಳನ್ನು Facebook ಅಥವಾ Facebook ಕಂಪನಿಗಳ ಬೇರಾವುದೇ ಸದಸ್ಯರು ಅವರ ಸ್ವಂತ ಬಳಕೆಯ ಉದ್ದೇಶಗಳಿಗೆ ಬಳಸುವುದಕ್ಕಾಗಿ ಬಳಸಿಕೊಳ್ಳುವುದೂ ಇಲ್ಲ ಮತ್ತು ಹಾಗೆ ಮಾಡುವ ಯಾವುದೇ ಯೋಚನೆಗಳೂ ಇಲ್ಲ.

Facebook ಕಂಪನಿಗಳು ನನ್ನ WhatsApp ಮಾಹಿತಿ ಬಳಸುವ ಕುರಿತು ನನಗೆ ಏನೆಲ್ಲ ಆಯ್ಕೆಗಳಿವೆ?

ನೀವು ಯಾವುದೇ ಸಮಯದಲ್ಲಿ ನಮ್ಮ ಸೇವೆಗಳ ಬಳಕೆಯನ್ನು ನಿಲ್ಲಿಸಬಹುದು ಮತ್ತು ಆ್ಯಪ್‌ನಲ್ಲಿರುವ ನನ್ನ ಖಾತೆ ಅಳಿಸಿ ಎಂಬ ಫೀಚರ್ ಮೂಲಕ ಖಾತೆಯನ್ನು ಅಳಿಸಬಹುದು. ನಿಮ್ಮ WhatsApp ಖಾತೆಯನ್ನು ಅಳಿಸುವುದರಿಂದ ಬೇರೆ Facebook ಕಂಪನಿಗಳ ಆ್ಯಪ್‌ಗಳು ಮತ್ತು ಸೇವೆಗಳನ್ನು ಬಳಸುವ ನಿಮ್ಮ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದೇ ರೀತಿ, ನಿಮ್ಮ Facebook ಖಾತೆಯನ್ನು ಅಳಿಸಿದಾಗ ಅದು ನಿಮ್ಮ WhatsApp ಬಳಕೆಯನ್ನು ಮುಂದುವರಿಸುವ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನೀವು ನಿಮ್ಮ WhatsApp ಖಾತೆಯನ್ನು ಅಳಿಸಿದಾಗ ಏನಾಗುತ್ತದೆ ಎಂಬುದನ್ನು ತಿಳಿಯಲು ಹೆಚ್ಚಿನ ಮಾಹಿತಿಗಾಗಿ WhatsApp ನ ಗೌಪ್ಯತಾ ನೀತಿಯನ್ನು ದಯವಿಟ್ಟು ನೋಡಿ.

ಈ ಅಂಕಣವು ಸಹಾಯಕಾರಿಯಾಗಿತ್ತೇ?
ಹೌದುಇಲ್ಲ
ಈ ಅಂಕಣವು ಏಕೆ ಸಹಾಯಕಾರಿಯಾಗಲಿಲ್ಲ?
  • ಈ ಅಂಕಣವು ಗೊಂದಲಮಯವಾಗಿದೆ
  • ಈ ಅಂಕಣವು ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ
  • ಈ ಪರಿಹಾರವು ಕಾರ್ಯನಿರ್ವಹಿಸುತ್ತಿಲ್ಲ
  • ನಾನು ಈ ಫೀಚರ್‌ಗಳನ್ನು ಅಥವಾ ನೀತಿಯನ್ನು ಇಷ್ಟಪಡುವುದಿಲ್ಲ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸಹಾಯ ಕೇಂದ್ರ

WHATSAPP

ಫೀಚರ್‌ಗಳು

ಭದ್ರತೆ

ಡೌನ್‌ಲೋಡ್ ಮಾಡಿ

WhatsApp Web

ವ್ಯವಹಾರ

ಗೌಪ್ಯತೆ

ಸಂಸ್ಥೆ

ವಿವರ

ಉದ್ಯೋಗಗಳು

ಲಾಂಛನ ಕೇಂದ್ರ

ಸಂಪರ್ಕಿಸಿ

ಬ್ಲಾಗ್

WhatsApp ಕಥೆಗಳು

ಡೌನ್‌ಲೋಡ್‌

Mac/PC

Android

iPhone

ಸಹಾಯ

ಸಹಾಯ ಕೇಂದ್ರ

ಟ್ವಿಟ್ಟರ್

Facebook

ಕೊರೊನಾವೈರಸ್

2022 © WhatsApp LLC

ಗೌಪ್ಯತೆ ಮತ್ತು ನಿಬಂಧನೆಗಳು