ಬ್ಯುಸಿನೆಸ್ ಫೀಚರ್‌ಗಳ ಕುರಿತು
ನಾವು ಸ್ಪಷ್ಟಪಡಿಸುವುದೇನೆಂದರೆ, ಇತ್ತೀಚಿನ ನಿಯಮಗಳು ಮತ್ತು ಗೌಪ್ಯತೆ ನೀತಿ ಅಪ್‌ಡೇಟ್‌ಗಳು ವೈಯಕ್ತಿಕ ಮೆಸೇಜ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. WhatsApp ನಲ್ಲಿ ಐಚ್ಛಿಕ ಬ್ಯುಸಿನೆಸ್ ಫೀಚರ್‌ಗಳಿಗೆ ಈ ಬದಲಾವಣೆ ಸಂಬಂಧಿಸಿದೆ ಮತ್ತು ಡೇಟಾವನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಹಾಗೂ ಬಳಸುತ್ತೇವೆ ಎಂಬ ಬಗ್ಗೆ ಹೆಚ್ಚಿನ ಪಾರದರ್ಶಕತೆಯನ್ನು ಇದು ಒದಗಿಸುತ್ತದೆ.

ಯಾವುದು ಬದಲಾಗುವುದಿಲ್ಲ?
ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಮತ್ತು ಕಾಲ್‌ಗಳ ಸುರಕ್ಷತೆ ಹಾಗೂ ಭದ್ರತೆ ಬದಲಾಗುವುದಿಲ್ಲ. ಅವುಗಳನ್ನು ಆರಂಭದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಅವುಗಳನ್ನು WhatsApp ಮತ್ತು Facebook ಓದಲಾಗದು ಅಥವಾ ಕೇಳಿಸಿಕೊಳ್ಳಲಾಗದು. ನಾವು ಎಂದೂ ಈ ಭದ್ರತೆಯನ್ನು ದುರ್ಬಲಗೊಳಿಸುವುದಿಲ್ಲ. ನಮ್ಮ ಬದ್ಧತೆ ಬಗ್ಗೆ ನಿಮಗೆ ತಿಳಿಸಲು ನಾವು ಪ್ರತಿ ಚಾಟ್‌ಗೂ ಲೇಬಲ್ ಪ್ರದರ್ಶಿಸುತ್ತೇವೆ.
ಐಚ್ಛಿಕ ಬ್ಯುಸಿನೆಸ್ ಫೀಚರ್‌ಗಳು
ಪ್ರತಿ ದಿನ ಬ್ಯುಸಿನೆಸ್ ಖಾತೆಗೆ ಮೆಸೇಜ್ ಮಾಡುವ 175 ಮಿಲಿಯನ್‌ಗೂ ಹೆಚ್ಚು ಜನರಿಗೆ ಉತ್ತಮ ನೆರವು ನೀಡುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ. ಬ್ಯುಸಿನೆಸ್ ಜೊತೆಗೆ ಸುರಕ್ಷಿತವಾಗಿ, ಉತ್ತಮವಾಗಿ ಮತ್ತು ಎಲ್ಲರಿಗೂ ಸುಲಭವಾಗುವಂತೆ ಸಂವಹನ ನಡೆಸಲು ಅನುವು ಮಾಡುವ ನಿಟ್ಟಿನಲ್ಲಿ ನಾವು ಪಡುತ್ತಿರುವ ಅಪಾರ ಪರಿಶ್ರಮದಲ್ಲಿ ಐಚ್ಛಿಕ ಬ್ಯುಸಿನೆಸ್ ಫೀಚರ್‌ಗಳಿಗೆ ಸಂಬಂಧಿಸಿದ ಅಪ್‌ಡೇಟ್‌ಗಳೂ ಕೂಡ ಒಂದು ಭಾಗವಾಗಿವೆ. ಈ ಪ್ರಯತ್ನಗಳು ಇವುಗಳನ್ನು ಒಳಗೊಂಡಿದೆ:
- ಗ್ರಾಹಕ ಸೇವೆಗೆ ಅನುಕೂಲ ಕಲ್ಪಿಸುವುದು: ಪ್ರಶ್ನೆಗಳನ್ನು ಕೇಳುವುದು, ಖರೀದಿ ಮಾಡುವುದು ಅಥವಾ ಖರೀದಿ ರಸೀದಿಗಳಂತಹ ಸಹಾಯಕ ಮಾಹಿತಿಯನ್ನು ಪಡೆಯುವುದಕ್ಕಾಗಿ ಬ್ಯುಸಿನೆಸ್‌ಗಳ ಜೊತೆಗೆ ಚಾಟ್ ಮಾಡಲು ಜನರಿಗೆ ಅನುಕೂಲವಾಗುತ್ತದೆ. Facebook ಬ್ಯುಸಿನೆಸ್ ಪ್ರಾಡಕ್ಟ್‌ಗಳನ್ನು ಬಳಸುತ್ತಿರಬಹುದಾದ ಬ್ಯುಸಿನೆಸ್‌ಗಳ ಜೊತೆಗೆ ಚಾಟ್ ಮಾಡುವುದನ್ನು ನಾವು ಇದೀಗ ಸುಲಭ ಮಾಡುತ್ತಿದ್ದೇವೆ. ಗ್ರಾಹಕರಿಗೆ ಪ್ರತಿಕ್ರಿಯೆ ನೀಡಲು ಕೆಲವು ಬ್ಯುಸಿನೆಸ್‌ಗಳಿಗೆ ಸುರಕ್ಷಿತ ಹೋಸ್ಟಿಂಗ್ ಸೇವೆಗಳು ಅಗತ್ಯವಿರುತ್ತವೆ. ಇದನ್ನು Facebook ಒದಗಿಸಲು ಯೋಜಿಸುತ್ತಿದೆ. ಈ ಸೇವೆಯನ್ನು ಬ್ಯುಸಿನೆಸ್ ಬಳಸುವಾಗ, ಚಾಟ್‌ಗೆ ನಾವು ಈ ಬಗ್ಗೆ ಸ್ಪಷ್ಟವಾಗಿ ಲೇಬಲ್ ಪ್ರದರ್ಶನ ಮಾಡುತ್ತೇವೆ. ಆಗ, ಅವುಗಳಿಗೆ ಮೆಸೇಜ್ ಮಾಡಬೇಕೆ ಅಥವಾ ಬೇಡವೇ ಎಂದು ನೀವು ನಿರ್ಧರಿಸಬಹುದು.
- ಬ್ಯುಸಿನೆಸ್ ಅನ್ನು ಹುಡುಕುವುದು: Facebook ಅಥವಾ Instagram ನಲ್ಲಿ ಬರುವ ಜಾಹಿರಾತಿನ ಮೇಲೆ ಒಂದು ಬಟನ್ ಕಾಣಿಸುತ್ತದೆ. ಈ ಬಟನ್ ಮೇಲೆ ಕ್ಲಿಕ್ ಮಾಡಿದರೆ WhatsApp ಮೂಲಕ ಜನರು ಬ್ಯುಸಿನೆಸ್ಗೆ ಸಂದೇಶ ಕಳುಹಿಸಬಹುದು. ಈ ಮೂಲಕ ಜನರು ಈಗಾಗಲೇ ಬ್ಯುಸಿನೆಸ್ಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. Facebook ನಲ್ಲಿ ಕಾಣಿಸುವ ಇತರ ಜಾಹೀರಾತುಗಳ ರೀತಿಯಲ್ಲಿಯೇ, ಈ ಜಾಹೀರಾತುಗಳ ಮೇಲೆ ನೀವು ಕ್ಲಿಕ್ ಮಾಡಿದಾಗ, Facebook ನಲ್ಲಿ ನಿಮಗೆ ತೋರಿಸುವ ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ಬಳಸಬಹುದಾಗಿದೆ. ಯಾವುದೇ ಆರಂಭದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಮಾಡಿದ ಮೆಸೇಜ್‌ಗಳ ಕಂಟೆಂಟ್ ಅನ್ನು WhatsApp ಮತ್ತು Facebook ನೋಡಲಾಗದು.
- ಶಾಪಿಂಗ್ ಅನುಭವಗಳು: ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಲಭ್ಯವಿದ್ದಾಗ, Facebook ಅಥವಾ Instagram ನಲ್ಲಿ ಶಾಪ್ ಹೊಂದಿರುವ ಕೆಲವು ಬ್ಯುಸಿನೆಸ್‌ಗಳು, ಈಗಾಗಲೇ ತಮ್ಮ WhatsApp ಬ್ಯುಸಿನೆಸ್ ಪ್ರೊಫೈಲ್‌ನಲ್ಲೂ ಶಾಪ್‌ಗಳನ್ನು ಹೊಂದಿರುತ್ತಾರೆ. ಇದರಿಂದ, Facebook ಮತ್ತು Instagram ನಲ್ಲಿ ಬ್ಯುಸಿನೆಸ್‌ನ ಪ್ರಾಡಕ್ಟ್‌ಗಳನ್ನು ನೀವು ನೋಡಬಹುದು ಮತ್ತು ನೇರವಾಗಿ WhatsApp ಇಂದ ಖರೀದಿ ಮಾಡಬಹುದು. ನೀವು ಶಾಪ್‌ಗಳ ಜೊತೆಗೆ ಸಂವಹನ ನಡೆಸಲು ಬಯಸಿದರೆ, Facebook ಜೊತೆಗೆ ನಿಮ್ಮ ಡೇಟಾವನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ ಎಂದು WhatsApp ನಲ್ಲಿ ನಾವು ನಿಮಗೆ ತಿಳಿಸುತ್ತೇವೆ.
ಈ ಐಚ್ಛಿಕ ಫೀಚರ್‌ಗಳ ಬಗ್ಗೆ ಮತ್ತು Facebook ಜೊತೆಗೆ ನಾವು ಹೇಗೆ ಕೆಲಸ ಮಾಡುತ್ತೇವೆ ಎಂಬ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಬಹುದು.