ಕಾಂಟ್ಯಾಕ್ಟ್ ಅಪ್‌ಲೋಡ್ ಕುರಿತು

ಕಾಂಟ್ಯಾಕ್ಟ್‌ ಅಪ್‌ಲೋಡ್ ಎಂಬುದು ಒಂದು ಐಚ್ಛಿಕ ಸೌಲಭ್ಯವಾಗಿದ್ದು, ನಿಮ್ಮ ಸಾಧನದ ಅಡ್ರೆಸ್ ಬುಕ್‌ನಲ್ಲಿರುವ ಯಾವ ಕಾಂಟ್ಯಾಕ್ಟ್‌ಗಳು WhatsApp ಅನ್ನು ಕೂಡ ಬಳಸುತ್ತವೆ ಎಂಬುದನ್ನು ಗುರುತಿಸಲು ನಮಗೆ ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ನಾವು ಅವರನ್ನು ನಿಮ್ಮ WhatsApp ಕಾಂಟ್ಯಾಕ್ಟ್‌ಗಳಿಗೆ ಸೇರಿಸಬಹುದು. ಮಾತ್ರವಲ್ಲದೆ, WhatsApp ನ ಪ್ರಸ್ತುತ ಬಳಕೆದಾರರಲ್ಲದ ನಿಮ್ಮ ಕಾಂಟ್ಯಾಕ್ಟ್‌ಗಳು, ನಂತರ ಸೈನ್-ಅಪ್ ಮಾಡಿದಾಗ, ನಿಮ್ಮ WhatsApp ಕಾಂಟ್ಯಾಕ್ಟ್‌ಗಳನ್ನು ತ್ವರಿತವಾಗಿ ಅಪ್‌ಡೇಟ್ ಮಾಡಬಹುದು. WhatsApp ನಿಮ್ಮ ಕಾಂಟ್ಯಾಕ್ಟ್‌ಗಳನ್ನು Facebook ಜೊತೆ ಶೇರ್ ಮಾಡಿಕೊಳ್ಳುವುದಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಿಮ್ಮ ಸಾಧನದಲ್ಲಿರುವ ನಿಮ್ಮ WhatsApp ಆವೃತ್ತಿಯು ನಿಮ್ಮ WhatsApp ಕಾಂಟ್ಯಾಕ್ಟ್‌‌ಗಳ ಹೆಸರುಗಳನ್ನು ನಿಮ್ಮ ಸಾಧನದ ಅಡ್ರೆಸ್ ಬುಕ್‌‍ನಿಂದ ಪ್ರದರ್ಶಿಸುತ್ತದೆ ಮತ್ತು ಆ ಮೂಲಕ ನೀವು ಅವರನ್ನು ಸುಲಭವಾಗಿ ಸಂಪರ್ಕಿಸಬಹುದು.
ನೀವು ಕಾಂಟ್ಯಾಕ್ಟ್‌ ಅಪ್‌ಲೋಡ್ ಸೌಲಭ್ಯವನ್ನು ಬಳಸುವಾಗ ಮತ್ತು ನಿಮ್ಮ ಸಾಧನದ ಅಡ್ರೆಸ್ ಬುಕ್‌ಗೆ ಪ್ರವೇಶಾವಕಾಶವನ್ನು WhatsApp ಗೆ ನೀಡುವಾಗ, WhatsApp ನಿಯತವಾಗಿ ನಿಮ್ಮ ಅಡ್ರೆಸ್ ಬುಕ್‌ನಲ್ಲಿರುವ ಫೋನ್ ನಂಬರ್‌ಗಳನ್ನು ಪ್ರವೇಶಿಸಿ ಅಪ್‌ಲೋಡ್ ಮಾಡುತ್ತಿರುತ್ತದೆ. ಅದರಲ್ಲಿ WhatsApp ಬಳಕೆದಾರರು ಮತ್ತು ನಿಮ್ಮ ಇತರ ಕಾಂಟ್ಯಾಕ್ಟ್‌‌ಗಳು ಕೂಡ ಸೇರಿರುತ್ತವೆ. ನಿಮ್ಮ ಯಾವುದಾದರೂ ಕಾಂಟ್ಯಾಕ್ಟ್‌‌ ಇನ್ನೂ WhatsApp ಬಳಸುತ್ತಿಲ್ಲವಾದರೆ, ಬಳಕೆದಾರರಲ್ಲದ ಕಾಂಟ್ಯಾಕ್ಟ್‌‌ಗಳನ್ನು ಗುರುತಿಸಲಾಗದಂತೆ ನಾವು ಈ ಮಾಹಿತಿಯನ್ನು ನಿರ್ವಹಿಸುತ್ತೇವೆ. ನಾವು ಈ ಫೋನ್ ನಂಬರ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ ಮತ್ತು ಕೇವಲ ಕ್ರಿಪ್ಟೊಗ್ರಾಫಿಕ್ ಹ್ಯಾಷ್ ಮೌಲ್ಯಗಳನ್ನು ರಚಿಸುವುದಕ್ಕಾಗಿ ಒಂದು ಕ್ಷಣಕ್ಕೆ ಬಳಸುತ್ತೇವೆ, ಅದು ಅವರು WhatsApp ಗೆ ಸೇರ್ಪಡೆಗೊಂಡರೆ ನೀವು ಈ ಕಾಂಟ್ಯಾಕ್ಟ್‌‌‌ಗಳೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿ ಸಂಪರ್ಕಿಸಲು ಅವಕಾಶ ಮಾಡಿಕೊಡುತ್ತದೆ. ನೀವು ಕಾಂಟ್ಯಾಕ್ಟ್‌ ಅಪ್‌ಲೋಡ್ ಸೌಲಭ್ಯವನ್ನು ನಿಮ್ಮ ಸಾಧನ-ಆಧರಿತ ಸೆಟ್ಟಿಂಗ್‌ಗಳ ಮೂಲಕ ನಿಯಂತ್ರಿಸಬಹುದು.
ಇದು ಸಹಾಯಕವಾಗಿದೆಯೇ?
ಹೌದು
ಇಲ್ಲ