WhatsApp ಗೌಪ್ಯತಾ ನೀತಿಯ ಕುರಿತಾದ ನಿಮ್ಮ ಪ್ರಶ್ನೆಗಳಿಗೆ ಉತ್ತರ

ಇತ್ತೀಚೆಗೆ ನಾವು ನಮ್ಮ ಗೌಪ್ಯತಾ ನೀತಿಯನ್ನು ಅಪ್‌ಡೇಟ್ ಮಾಡಿದ್ದೇವೆ ಹಾಗೂ ನಮ್ಮನ್ನು ಚಿಂತನೆಗೆ ಹಚ್ಚುವ ಹಲವು ಪ್ರಶ್ನೆಗಳು ನಮಗೆ ಬಂದಿವೆ. ಕೆಲವು ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ, ನಾವು ಸ್ವೀಕರಿಸಿದ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ಇಚ್ಚಿಸುತ್ತೇವೆ. ಖಾಸಗಿಯಾಗಿ ಸಂವಹನ ಮಾಡಲು ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ WhatsApp ಅನ್ನು ರೂಪಿಸಲು ನಾವು ಅಪಾರ ಶ್ರಮ ವಹಿಸುತ್ತೇವೆ.
ಗೌಪ್ಯತೆ ನೀತಿಯನ್ನು ಅಪ್‌ಡೇಟ್ ಮಾಡಿದ್ದರಿಂದ, ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಜೊತೆಗೆ ನೀವು ವಿನಿಮಯ ಮಾಡಿಕೊಳ್ಳುವ ಮೆಸೇಜ್‌ಗಳ ಗೌಪ್ಯತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಾವು ಸ್ಪಷ್ಟವಾಗಿ ತಿಳಿಸಲು ಬಯಸುತ್ತೇವೆ. WhatsApp ನಲ್ಲಿ ಐಚ್ಛಿಕ ಬ್ಯುಸಿನೆಸ್ ಫೀಚರ್‌ಗಳಿಗೆ ಈ ಬದಲಾವಣೆಗಳು ಸಂಬಂಧಿಸಿವೆ. ಇದು ನಾವು ಡೇಟಾವನ್ನು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬ ಬಗ್ಗೆ ಇನ್ನಷ್ಟು ಪಾರದರ್ಶಕತೆಯನ್ನು ಒದಗಿಸುತ್ತದೆ. ಹೊಸ ಬ್ಯುಸಿನೆಸ್ ಫೀಚರ್‌ಗಳು ಮತ್ತು WhatsApp ನ ಗೌಪ್ಯತೆ ನೀತಿ ಅಪ್‌ಡೇಟ್‌ ಬಗ್ಗೆ ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.
ನಿಮ್ಮ ವೈಯಕ್ತಿಕ ಮೆಸೇಜಿಂಗ್‌ನ ಗೌಪ್ಯತೆ ಮತ್ತು ಸುರಕ್ಷತೆ
ನಾವಾಗಲೀ ಅಥವಾ Facebook ಆಗಲೀ ನಿಮ್ಮ ವೈಯಕ್ತಿಕ ಮೆಸೇಜ್‌ಗಳನ್ನು ನೋಡಲಾಗದು ಅಥವಾ ಕಾಲ್‌ಗಳನ್ನು ಕೇಳಿಸಿಕೊಳ್ಳಲಾಗದು: WhatsApp ಆಗಲೀ ಅಥವಾ Facebook ಆಗಲೀ, WhatsApp ನಲ್ಲಿ ನೀವು ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಹೋದ್ಯೋಗಿಗಳ ಜೊತೆಗೆ ನಡೆಸಿದ ನಿಮ್ಮ ಮೆಸೇಜ್‌ ವಿನಿಮಯಗಳನ್ನು ಓದಲಾಗದು ಅಥವಾ ನಿಮ್ಮ ಕಾಲ್‌ಗಳನ್ನು ಕೇಳಲಾಗದು. ನೀವು ಶೇರ್ ಮಾಡಿಕೊಳ್ಳುವ ಎಲ್ಲವೂ, ನಿಮ್ಮ ನಡುವೆಯೇ ಇರುತ್ತದೆ. ಯಾಕೆಂದರೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳನ್ನು ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್‌ ಮಾಡಲಾಗಿದೆ. ಈ ಸುರಕ್ಷತೆಯನ್ನು ನಾವು ಎಂದಿಗೂ ದುರ್ಬಲಗೊಳಿಸುವುದಿಲ್ಲ ಮತ್ತು ನಾವು ಪ್ರತಿ ಚಾಟ್‌ನಲ್ಲೂ ಈ ಲೇಬಲ್‌ ಅನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತೇವೆ. ಯಾಕೆಂದರೆ, ನಿಮಗೆ ನಮ್ಮ ಬದ್ಧತೆ ತಿಳಿದಿರಬೇಕು. WhatsApp ಸುರಕ್ಷತೆಯ ಬಗ್ಗೆ ಇಲ್ಲಿ ಇನ್ನಷ್ಟನ್ನು ತಿಳಿದುಕೊಳ್ಳಬಹುದು.
ಪ್ರತಿಯೊಬ್ಬರೂ ಯಾರ್‍ಯಾರೊಂದಿಗೆ ಮೆಸೇಜ್‌ ವಿನಿಮಯ ಮಾಡುತ್ತಾರೆ ಅಥವಾ ಕರೆ ಮಾಡುತ್ತಾರೆ ಎಂಬ ವಿವರವನ್ನು ನಾವು ಹೊಂದಿರುವುದಿಲ್ಲ: ಮೊಬೈಲ್ ಸೇವೆ ಪೂರೈಕೆದಾರರು ಮತ್ತು ಆಪರೇಟರ್‌ಗಳು ಸಾಂಪ್ರದಾಯಿಕವಾಗಿ ಈ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಎರಡು ಬಿಲಿಯನ್ ಬಳಕೆದಾರರ ಇಂತಹ ದಾಖಲೆಗಳನ್ನು ಇರಿಸಿಕೊಳ್ಳುವುದು ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅಪಾಯಕರ ಎಂದು ನಾವು ನಂಬುತ್ತೇವೆ ಮತ್ತು ನಾವು ಹಾಗೆ ಮಾಡುವುದೂ ಇಲ್ಲ.
ನೀವು ಶೇರ್ ಮಾಡಿದ ಲೊಕೇಶನ್‌ಗಳನ್ನು ನಾವಾಗಲೀ ಅಥವಾ Facebook ಆಗಲೀ ನೋಡಲು ಸಾಧ್ಯವಿಲ್ಲ: WhatsApp ನಲ್ಲಿ ನಿಮ್ಮ ಲೊಕೇಶನ್‌ ಅನ್ನು ಯಾರ ಜೊತೆಗಾದರೂ ನೀವು ಹಂಚಿಕೊಂಡಾಗ, ನಿಮ್ಮ ಲೊಕೇಶನ್‌ ಅನ್ನು ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಷನ್‌ನಿಂದ ಸುರಕ್ಷಿತಗೊಳಿಸಲಾಗುತ್ತದೆ. ಅಂದರೆ ನೀವು ಯಾರ ಜೊತೆಗೆ ಶೇರ್ ಮಾಡಿಕೊಳ್ಳುತ್ತೀರೋ ಅವರನ್ನು ಹೊರತುಪಡಿಸಿ ಬೇರೆ ಯಾರೂ ಕೂಡ ನಿಮ್ಮ ಲೊಕೇಶನ್ ಅನ್ನು ನೋಡಲು ಸಾಧ್ಯವಿಲ್ಲ.
ನಾವು ನಿಮ್ಮ ಕಾಂಟ್ಯಾಕ್ಟ್‌ಗಳನ್ನು Facebook ಜೊತೆ ಶೇರ್ ಮಾಡುವುದಿಲ್ಲ: ನೀವು ನಮಗೆ ಅನುಮತಿ ನೀಡಿದಾಗ ಮಾತ್ರ, ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಮೆಸೇಜ್‌ ಕಳುಹಿಸುವುದಕ್ಕಾಗಿ ನಿಮ್ಮ ಅಡ್ರೆಸ್ ಬುಕ್‌ನಿಂದ ಫೋನ್ ನಂಬರ್‌ಗಳಿಗೆ ಮಾತ್ರ ಪ್ರವೇಶಾವಕಾಶ ಪಡೆದುಕೊಳ್ಳುತ್ತೇವೆ ಮತ್ತು Facebook ಒದಗಿಸುವ ಇತರ ಆ್ಯಪ್‌ಗಳ ಜೊತೆಗೂ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ಗಳನ್ನು ಶೇರ್ ಮಾಡುವುದಿಲ್ಲ.
ಗ್ರೂಪ್‌ಗಳು ಖಾಸಗಿಯಾಗಿಯೇ ಉಳಿಯುತ್ತವೆ: ಮೆಸೇಜ್‍ಗಳನ್ನು ರವಾನಿಸಲು ಮತ್ತು ನಮ್ಮ ಸೇವೆಯನ್ನು ಸ್ಪ್ಯಾಮ್ ಮತ್ತು ದುರ್ಬಳಕೆಯಿಂದ ರಕ್ಷಿಸಿಕೊಳ್ಳಲು ನಾವು ಗ್ರೂಪ್ ಸದಸ್ಯತ್ವವನ್ನು ಬಳಸುತ್ತೇವೆ. ಈ ಡೇಟಾವನ್ನು ಜಾಹೀರಾತು ಉದ್ದೇಶಗಳಿಗಾಗಿ ನಾವು Facebook ಜೊತೆ ಶೇರ್ ಮಾಡುವುದಿಲ್ಲ. ಅಷ್ಟೇ ಅಲ್ಲ, ಈ ವೈಯಕ್ತಿಕ ಚಾಟ್‌ಗಳು ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಟ್ ಆಗಿರುವುದರಿಂದ ನಾವು ಅವರ ಕಂಟೆಂಟ್ ಅನ್ನು ನೋಡಲಾಗದು.
ನೀವು ನಿಮ್ಮ ಮೆಸೇಜ್‍ಗಳನ್ನು ಅದೃಶ್ಯವಾಗುವಂತೆ ಸೆಟ್ ಮಾಡಬಹುದು: ಹೆಚ್ಚುವರಿ ಗೌಪ್ಯತೆಗಾಗಿ, ನೀವು ಮೆಸೇಜ್ ಕಳುಹಿಸಿದ ನಂತರ ಚಾಟ್‌ಗಳಿಂದ ಅವು ಅದೃಶ್ಯವಾಗುವಂತೆ ಸೆಟ್ ಮಾಡಬಹುದು. ಈ ಬಗ್ಗೆ ಈ ಸಹಾಯ ಕೇಂದ್ರದ ಲೇಖನದಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ನಿಮ್ಮ ಡೇಟಾವನ್ನು ನೀವು ಡೌನ್‌ಲೋಡ್ ಮಾಡಬಹುದು: ನಾವು ಯಾವ ಮಾಹಿತಿಯನ್ನುಹೊಂದಿದ್ದೇವೆ ಎಂದು ನೀವು ಆ್ಯಪ್‌ನಲ್ಲಿಯೇ ನೋಡಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಬಗ್ಗೆ ಈ ಸಹಾಯ ಕೇಂದ್ರದ ಲೇಖನದಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.
ಬ್ಯುಸಿನೆಸ್ ಮೆಸೇಜಿಂಗ್ ಮತ್ತು Facebook ಜೊತೆ ನಾವು ಕಾರ್ಯನಿರ್ವಹಿಸುವ ಬಗೆ
ಪ್ರತಿದಿನ, ಜಗತ್ತಿನಾದ್ಯಂತ ಲಕ್ಷಾಂತರ ಜನರು ವಿವಿಧ ರೀತಿಯ ಬ್ಯುಸಿನೆಸ್‌ಗಳೊಂದಿಗೆ WhatsApp ನಲ್ಲಿ ಸಂವಹನ ನಡೆಸುತ್ತಾರೆ. ನೀವು ಬ್ಯುಸಿನೆಸ್‌ಗಳ ಜೊತೆಗೆ ಮೆಸೇಜ್‌ ಮಾಡಲು ಬಯಸಿದರೆ, ಇದನ್ನು ಇನ್ನಷ್ಟು ಸರಳ ಮತ್ತು ಉತ್ತಮವಾಗಿಸಬೇಕೆಂದು ನಾವು ಬಯಸಿದ್ದೇವೆ. ಈ ವೈಶಿಷ್ಟ್ಯಗಳನ್ನು ಬಳಸುತ್ತಿರುವ ಯಾವುದೇ ಬ್ಯುಸಿನೆಸ್ ಜೊತೆಗೆ ನೀವು ಸಂವಹನ ನಡೆಸುತ್ತಿರುವಾಗ ಈ ಕುರಿತು WhatsApp ಸ್ಪಷ್ಟಪಡಿಸಬೇಕೆಂದು ಎಂದಿಗೂ ಬಯಸುತ್ತದೆ.
Facebook ಹೋಸ್ಟಿಂಗ್ ಸೇವೆಗಳು: ನಿಮ್ಮ ಕುಟುಂಬ ಸದಸ್ಯರು ಅಥವಾ ಸ್ನೇಹಿತರ ಜೊತೆಗೆ ಮೆಸೇಜ್ ಮಾಡುವುದಕ್ಕಿಂತಲೂ ಬ್ಯುಸಿನೆಸ್‌ಗಳ ಜೊತೆಗೆ ಮೆಸೇಜ್‌ ಮಾಡುವುದು ವಿಭಿನ್ನ. ಕೆಲವು ದೊಡ್ಡ ಬ್ಯುಸಿನೆಸ್‌ಗಳು ತಮ್ಮ ಸಂವಹನವನ್ನು ನಿರ್ವಹಿಸಲು ಹೋಸ್ಟಿಂಗ್ ಸೇವೆಗಳನ್ನು ಬಳಸಬೇಕಾಗುತ್ತದೆ. ಅದಕ್ಕಾಗಿಯೇ, ತಮ್ಮ ಗ್ರಾಹಕರೊಂದಿಗೆ WhatsApp ಚಾಟ್‌ಗಳನ್ನು ನಿರ್ವಹಿಸಲು, ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಖರೀದಿ ರಶೀದಿಗಳಂತಹ ಸಹಾಯಕ ಮಾಹಿತಿಯನ್ನು ಕಳುಹಿಸಲು Facebook ಒದಗಿಸುವ ಸುರಕ್ಷಿತ ಹೋಸ್ಟಿಂಗ್ ಸೇವೆಗಳ ಬಳಕೆ ಆಯ್ಕೆಯನ್ನು ಬ್ಯುಸಿನೆಸ್‌ಗಳಿಗೆ ಒದಗಿಸುತ್ತಿದ್ದೇವೆ. ಆದರೆ, ನೀವು ಬ್ಯುಸಿನೆಸ್ ಜೊತೆಗೆ ಫೋನ್, ಇಮೇಲ್ ಅಥವಾ WhatsApp ಮೂಲಕ ಸಂವಹನ ಮಾಡುತ್ತಿದ್ದರೆ, ನೀವು ಏನು ಹೇಳುತ್ತಿದ್ದೀರಿ ಎಂಬುದನ್ನು ಅವು ನೋಡಬಹುದು ಹಾಗೂ ಆ ಮಾಹಿತಿಯನ್ನು ತನ್ನದೇ ಆದ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಬಳಸಬಹುದು. ಇದು Facebook ನಲ್ಲಿ ಜಾಹೀರಾತನ್ನೂ ಸಹ ಒಳಗೊಂಡಿರಬಹುದು. ಈ ಕುರಿತು ನೀವು ಮಾಹಿತಿ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು, Facebook ನಿಂದ ಹೋಸ್ಟಿಂಗ್ ಸೇವೆಗಳನ್ನು ಬಳಸಲು ಆಯ್ಕೆಮಾಡುವ ಬ್ಯುಸಿನೆಸ್ ಜೊತೆಗೆ ನಡೆಸುವ ಸಂಭಾಷಣೆಗಳಿಗೆ ನಾವು ಸ್ಪಷ್ಟವಾಗಿ ಲೇಬಲ್ ಪ್ರದರ್ಶನ ಮಾಡುತ್ತೇವೆ.
ಬ್ಯುಸಿನೆಸ್‌ ಅನ್ನು ಹುಡುಕುವುದು: WhatsApp ಬಳಸಿ ಒಂದು ಬ್ಯುಸಿನೆಸ್‌ಗೆ ಮೆಸೇಜ್ ಕಳುಹಿಸುವ ಬಟನ್‍ ಇರುವ Facebook ಜಾಹೀರಾತು ನಿಮಗೆ ಕಾಣಿಸಬಹುದು. ನೀವು ನಿಮ್ಮ ಫೋನ್‌ನಲ್ಲಿ WhatsApp ಇನ್‍ಸ್ಟಾಲ್ ಮಾಡಿದ್ದರೆ, ಆ ಬ್ಯುಸಿನೆಸ್‌ಗೆ ಮೆಸೇಜ್ ಕಳುಹಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. Facebook ನಲ್ಲಿ ನಿಮಗೆ ಕಾಣಿಸುವ ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ಈ ಜಾಹೀರಾತುಗಳೊಂದಿಗೆ ನೀವು ಸಂವಹನ ಮಾಡುವ ವಿಧಾನವನ್ನು Facebook ಬಳಸಿಕೊಳ್ಳಬಹುದು.
WhatsApp ಪೇಮೆಂಟ್ಸ್‌: WhatsApp UPI ಪೇಮೆಂಟ್ಸ್‌ ಪ್ರತ್ಯೇಕ ಗೌಪ್ಯತೆ ನೀತಿಯನ್ನು ಹೊಂದಿದ್ದು, ಅದನ್ನು ನೀವು ಇಲ್ಲಿ ನೋಡಬಹುದು ಮತ್ತು ಆ ಗೌಪ್ಯತೆ ನೀತಿಯ ಮೇಲೆ ಈ ಅಪ್‌ಡೇಟ್‌ನಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ.
ಇದು ಸಹಾಯಕವಾಗಿದೆಯೇ?
ಹೌದು
ಇಲ್ಲ