ನಿಮ್ಮ ಖಾತೆಯನ್ನು ಹೇಗೆ ಅಳಿಸುವುದು

Android
iOS
KaiOS
ನೀವು ನಿಮ್ಮ ಖಾತೆಯನ್ನು WhatsApp ನಿಂದ ಅಳಿಸಬಹುದು. ನಿಮ್ಮ ಖಾತೆಯನ್ನು ಅಳಿಸುವುದು ಒಂದು ಹಿಂಪಡೆಯಲಾಗದ ಪ್ರಕ್ರಿಯೆಯಾಗಿದೆ. ಒಂದು ವೇಳೆ ನೀವು ಆಕಸ್ಮಿಕವಾಗಿ ಅಳಿಸಿದ್ದರೂ, ನಾವು ಅದನ್ನು ಹಿಂಪಡೆಯಲು ಸಾಧ್ಯವಿಲ್ಲ.
ನಿಮ್ಮ ಖಾತೆಯನ್ನು ಅಳಿಸಲು
 1. WhatsApp ತೆರೆಯಿರಿ.
 2. ಇನ್ನಷ್ಟು ಆಯ್ಕೆಗಳು
  more options
  > ಸೆಟ್ಟಿಂಗ್ಸ್ > ಖಾತೆ > ನನ್ನ ಖಾತೆ ಅಳಿಸಿ ಅನ್ನು ಟ್ಯಾಪ್ ಮಾಡಿ.
 3. ನಿಮ್ಮ ಫೋನ್ ನಂಬರ್ ಅನ್ನು ಪೂರ್ಣ ಅಂತರಾಷ್ಟ್ರೀಯ ಫಾರ್ಮ್ಯಾಟ್‌ನಲ್ಲಿ ನಮೂದಿಸಿ ಹಾಗೂ ನನ್ನ ಖಾತೆ ಅಳಿಸಿ ಅನ್ನು ಟ್ಯಾಪ್ ಮಾಡಿ.
 4. ನಿಮ್ಮ ಖಾತೆಯನ್ನು ಏಕೆ ಅಳಿಸುತ್ತಿದ್ದೀರಿ ಎಂಬುದಕ್ಕೆ ಡ್ರಾಪ್‌ಡೌನ್‌ನಲ್ಲಿ ಒಂದು ಕಾರಣವನ್ನು ಆಯ್ಕೆಮಾಡಿ.
 5. ನನ್ನ ಖಾತೆ ಅಳಿಸಿ ಅನ್ನು ಟ್ಯಾಪ್ ಮಾಡಿ.
ನಿಮ್ಮ ಖಾತೆಯನ್ನು ಅಳಿಸುವುದರಿಂದ:
 • WhatsApp ನಿಂದ ನಿಮ್ಮ ಖಾತೆ ಅಳಿಸಿಹೋಗುತ್ತದೆ.
 • ನಿಮ್ಮ ಹಳೆಯ ಮೆಸೇಜ್‌ ಅಳಿಸಿಹೋಗುತ್ತದೆ.
 • ನಿಮ್ಮನ್ನು ಎಲ್ಲಾ WhatsApp ಗ್ರೂಪ್‌ಗಳಿಂದ ಅಳಿಸಲಾಗುತ್ತದೆ.
 • ನಿಮ್ಮ Google Drive ಬ್ಯಾಕಪ್ ಅಳಿಸಿಹೋಗುತ್ತದೆ.
 • ನಿಮ್ಮನ್ನು ಚಾನೆಲ್ ಅಡ್ಮಿನ್ ಅಥವಾ ಫಾಲೋವರ್ ಆಗಿ ತೆಗೆದುಹಾಕಲಾಗುತ್ತದೆ, ಆದರೆ ನೀವು ಮಾಡಿದ ಯಾವುದೇ ಅಪ್‌ಡೇಟ್‌ಗಳು ಅಥವಾ ಪ್ರತಿಕ್ರಿಯೆಗಳು ಅಥವಾ ಸಮೀಕ್ಷೆಯ ಮತಗಳಂತಹ ಚಾನೆಲ್ ಸಂವಾದಗಳನ್ನು ಅಲ್ಲ.
ನೀವು ನಿಮ್ಮ ಖಾತೆಯನ್ನು ಅಳಿಸಿದರೆ:
 • ನೀವು ನಿಮ್ಮ ಖಾತೆಗೆ ಪುನಃ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
 • ನಿಮ್ಮ WhatsApp ಮಾಹಿತಿಯನ್ನು ಅಳಿಸಲು, ಅದರ ಅಳಿಸುವ ಪ್ರಕ್ರಿಯೆಯ ಆರಂಭದಿಂದ 30 ದಿನಗಳವರೆಗಿನ ಸಮಯ ತೆಗೆದುಕೊಳ್ಳಬಹುದು. ನೈಸರ್ಗಿಕ ವಿಕೋಪ, ಸಾಫ್ಟ್‌ವೇರ್ ದೋಷ ಅಥವಾ ಡೇಟಾ ನಷ್ಟವಾಗುವಂತಹ ಇತರ ಸಂದರ್ಭದಲ್ಲಿ ರಿಕವರ್‌ಗಾಗಿ ನಾವು ಬಳಸುವ ಬ್ಯಾಕಪ್ ಸ್ಟೋರೇಜ್‍ನಲ್ಲಿ 30 ದಿನಗಳ ನಂತರವೂ ನಿಮ್ಮ ಮಾಹಿತಿಯ ಪ್ರತಿಗಳು ನಮ್ಮಲ್ಲಿ ಉಳಿಯಬಹುದು. ಈ ಸಂದರ್ಭದಲ್ಲಿ ನಿಮಗೆ WhatsAppನಲ್ಲಿ ನಿಮ್ಮ ಮಾಹಿತಿಯು ಲಭ್ಯವಿರುವುದಿಲ್ಲ.
 • ನೀವು ರಚಿಸಿದ ಗ್ರೂಪ್‌ಗಳಿಗೆ ಸಂಬಂಧಪಟ್ಟಂತಹ ಇತರ ಮಾಹಿತಿ ಅಥವಾ ನಿಮಗೆ ಸಂಬಂಧಿಸಿದಂತೆ ಇತರ ಬಳಕೆದಾರು ಹೊಂದಿರುವಂತಹ ಮಾಹಿತಿಯ ಮೇಲೆ ಇದು ಪರಿಣಾಮ ಬೀರುವುದಿಲ್ಲ, ಉದಾಹರಣೆಗೆ ನೀವು ಅವರಿಗೆ ಕಳುಹಿಸಿದ ಮೆಸೇಜ್‌ಗಳ ಪ್ರತಿಗಳು.
 • ನಿಮ್ಮ ಖಾತೆಯನ್ನು ನೀವು ಅಳಿಸಿದ ನಂತರವೂ ನಾವು ಕೆಲವು ಲಾಗ್ ಡೇಟಾವನ್ನು ನಮ್ಮ ಡೇಟಾಬೇಸ್‌ಗಳಲ್ಲಿ ಉಳಿಸಿಕೊಳ್ಳಬಹುದು, ಆದರೆ ಅಂತಹ ಡೇಟಾವನ್ನು ಯಾವುದೇ ಗುರುತಿಸುವ ಮಾಹಿತಿಯಿಂದ ಬೇರ್ಪಡಿಸಲಾಗುತ್ತದೆ, ಅಂತಹ ಡೇಟಾವನ್ನು ಇನ್ನು ಮುಂದೆ ನಿಮ್ಮ ಖಾತೆಗೆ ಲಿಂಕ್ ಮಾಡಲಾಗುವುದಿಲ್ಲ. ಇದನ್ನು ಮಾಡಲು, ನಿಯಮಿತವಾಗಿ ನಾವು ಈ ಲಾಗ್ ಡೇಟಾದಿಂದ ಕೆಲವು ಗುರುತಿಸುವ ಮಾಹಿತಿಯನ್ನು ಅಳಿಸುತ್ತೇವೆ ಮತ್ತು ನಿಮ್ಮ ಖಾತೆಯ ID ಯ ಯಾವುದೇ ನಿದರ್ಶನವನ್ನು ಬದಲಿ ಗುರುತಿಸುವಿಕೆಯೊಂದಿಗೆ ನಾವು ಬದಲಿಸುತ್ತೇವೆ, ಅದನ್ನು ಅಳಿಸಿದ ನಂತರ ನಿಮ್ಮ ಖಾತೆಗೆ ಮತ್ತೆ ಲಿಂಕ್ ಮಾಡಲಾಗುವುದಿಲ್ಲ.
 • ಕಾನೂನು ವಿಚಾರಗಳು, ನಿಯಮಗಳ ಉಲ್ಲಂಘನೆ ಅಥವಾ ಹಾನಿ ತಡೆಗಟ್ಟುವ ಪ್ರಯತ್ನಗಳಂತಹ ಪ್ರಕ್ರಿಯೆಗಾಗಿ ನಿಮ್ಮ ಮಾಹಿತಿಯನ್ನು ನಾವು ಇರಿಸಿಕೊಳ್ಳಬಹುದು.
 • ಹೆಚ್ಚಿನ ಮಾಹಿತಿಗಾಗಿ, ನಮ್ಮ ಗೌಪ್ಯತಾ ನೀತಿಯನ್ನು ನೋಡಿ.
 • ಇತರ Meta ಕಂಪನಿಗಳೊಂದಿಗೆ ಹಂಚಿಕೊಂಡ ನಿಮ್ಮ ಮಾಹಿತಿಯನ್ನು ಸಹ ಅಳಿಸಲಾಗುತ್ತದೆ.
ನಿಮ್ಮ ಖಾತೆಯನ್ನು ಅಳಿಸುವುದರಿಂದ ಸ್ವಯಂಚಾಲಿತವಾಗಿ ಚಾನೆಲ್‌ಗಳ ಚಟುವಟಿಕೆಯನ್ನು ಅಳಿಸಲಾಗುವುದಿಲ್ಲ
ನೀವು WhatsApp ಚಾನೆಲ್‌ನ ಮಾಲೀಕರಾಗಿದ್ದರೆ:
 • ನಿಮ್ಮ ಚಾನೆಲ್ ಮತ್ತು ನಿಮ್ಮ WhatsApp ಖಾತೆಯನ್ನು ಅಳಿಸಲು ನೀವು ಬಯಸಿದರೆ, ಮೊದಲು ನಿಮ್ಮ ಚಾನೆಲ್ ಅನ್ನು ಅಳಿಸಿ.
 • ನಿಮ್ಮ ಚಾನೆಲ್ ಮತ್ತು ಚಾನೆಲ್ ಅಪ್‌ಡೇಟ್‌ಗಳನ್ನು ಸ್ವಯಂಚಾಲಿತವಾಗಿ ಅಳಿಸಲಾಗುವುದಿಲ್ಲ.
  • ನೀವು ಇತರ ಚಾನೆಲ್ ಅಡ್ಮಿನ್‌ಗಳಾಗಿದ್ದರೆ, ಚಾನೆಲ್ ಮಾಲೀಕತ್ವವನ್ನು ಚಾನೆಲ್ ಅನ್ನು ದೀರ್ಘಕಾಲ ಫಾಲೋ ಮಾಡಿರುವ ಅಡ್ಮಿನ್‌ಗೆ ವರ್ಗಾಯಿಸಲಾಗುತ್ತದೆ.
  • ನೀವು ಮಾತ್ರ ಚಾನೆಲ್ ಅಡ್ಮಿನ್ ಆಗಿದ್ದರೆ, ನಿಮ್ಮ ಚಾನೆಲ್ ಅನ್ನು ಅಳಿಸಲಾಗುತ್ತದೆ. ಅಪ್‌ಡೇಟ್‌ಗಳು ಇನ್ನೂ ಫಾಲೋವರ್‌ಗಳಿಗೆ ಗೋಚರಿಸುತ್ತವೆ, ಆದರೆ ಫಾಲೋ ಮಾಡದವರಿಗೆ ನಿಮ್ಮ ಚಾನೆಲ್ ಅನ್ನು ಹುಡುಕಲು ಅಥವಾ ಅಪ್‌ಡೇಟ್‌ಗಳನ್ನು ನೋಡಲು ಸಾಧ್ಯವಾಗುವುದಿಲ್ಲ.
 • ನೀವು ಚಾನೆಲ್‌ನಲ್ಲಿ ಹಂಚಿಕೊಂಡಿರುವ ಅಪ್‌ಡೇಟ್‌ಗಳನ್ನು ಅಳಿಸಲು ಬಯಸಿದರೆ, ಅಪ್‌ಡೇಟ್‌ಗಳನ್ನು ಅಳಿಸುವುದು ಹೇಗೆ ಎಂದು ತಿಳಿಯಿರಿ.
ನೀವು ಚಾನೆಲ್ ಅಡ್ಮಿನ್ ಆಗಿದ್ದರೆ:
 • ನೀವು ಚಾನೆಲ್‌ಗಳಲ್ಲಿ ಹಂಚಿಕೊಂಡಿರುವ ಅಪ್‌ಡೇಟ್‌ಗಳನ್ನು ಅಳಿಸಲಾಗುವುದಿಲ್ಲ. ನೀವು ಚಾನೆಲ್‌ನಲ್ಲಿ ಮಾಡಿರುವಂತಹ ಅಪ್‌ಡೇಟ್‌ಗಳನ್ನು ಅಳಿಸಲು ಬಯಸಿದರೆ, ಅಪ್‌ಡೇಟ್‌ಗಳನ್ನು ಅಳಿಸುವುದು ಹೇಗೆ ಎಂದು ತಿಳಿಯಿರಿ.
ಸಂಬಂಧಿತ ಸಂಪನ್ಮೂಲಗಳು:
ಇದು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತದೆಯೇ?
ಹೌದು
ಇಲ್ಲ