ಯಾವ ಮಾಹಿತಿಯನ್ನು Facebook ಕಂಪನಿಗಳೊಂದಿಗೆ WhatsApp ಹಂಚಿಕೊಳ್ಳುತ್ತದೆ?
ಸದ್ಯ WhatsApp ಕೆಲವು ವಿಧದ ಮಾಹಿತಿಗಳನ್ನು Facebook ಕಂಪನಿಗಳ ಜೊತೆ ಹಂಚಿಕೊಳ್ಳುತ್ತದೆ. ನಾವು ಇತರ Facebook ಕಂಪನಿಗಳ ಜೊತೆ ಹಂಚಿಕೊಳ್ಳುವ ಮಾಹಿತಿಗಳಲ್ಲಿ, ನಿಮ್ಮ ಖಾತೆಯ ನೋಂದಣಿ ಮಾಹಿತಿ (ನಿಮ್ಮ ಫೋನ್ ನಂಬರ್ ರೀತಿಯ), ವಹಿವಾಟಿನ ಡೇಟಾ (ಉದಾಹರಣೆಗೆ, ನೀವು Facebook Pay ಅಥವಾ WhatsApp ನಲ್ಲಿ ಶಾಪಿಂಗ್ ಮಾಡುತ್ತಿದ್ದಲ್ಲಿ), ಸೇವೆಗೆ ಸಂಬಂಧಿಸಿದ ಮಾಹಿತಿ, ನೀವು ನಮ್ಮ ಸೇವೆಗಳನ್ನು ಬಳಸುವಾಗ ಬ್ಯುಸಿನೆಸ್‌ಗಳೊಂದಿಗೆ ಹೇಗೆ ಸಂವಹನ ನಡೆಸುತ್ತೀರಿ ಎಂಬ ಮಾಹಿತಿ, ಮೊಬೈಲ್ ಸಾಧನದ ಮಾಹಿತಿ, ನಿಮ್ಮ IP ವಿಳಾಸಗಳು ಸೇರಿರುತ್ತವೆ ಮತ್ತು ಗೌಪ್ಯತಾ ನೀತಿ ವಿಭಾಗದ “ನಾವು ಸಂಗ್ರಹಿಸುವ ಮಾಹಿತಿ” ಎಂಬಲ್ಲಿ ಗುರುತಿಸಲಾಗಿರುವ ಇತರ ಮಾಹಿತಿ ಅಥವಾ ನಿಮ್ಮ ಗಮನಕ್ಕೆ ತಂದು ಪಡೆದಿರುವ ಮಾಹಿತಿ ಅಥವಾ ನಿಮ್ಮ ಒಪ್ಪಿಗೆಯ ಆಧಾರದಲ್ಲಿ ಪಡೆದ ಮಾಹಿತಿಯು ಒಳಗೊಂಡಿರಬಹುದು.
ನಾವು Facebook ಜೊತೆ ಶೇರ್ ಮಾಡುವ ಮಾಹಿತಿಯನ್ನು ಪ್ರಮುಖ ವಿಧಾನಗಳಲ್ಲಿ ಸೀಮಿತಗೊಳಿಸುತ್ತೇವೆ. ಉದಾಹರಣೆಗೆ, ನಿಮ್ಮ ವೈಯಕ್ತಿಕ ಸಂಭಾಷಣೆಗಳನ್ನು ನಾವು ಯಾವಾಗಲೂ ಕೊನೆಯಿಂದ-ಕೊನೆಯವರೆಗಿನ ಎನ್‌ಕ್ರಿಪ್ಷನ್‌ನಿಂದ ರಕ್ಷಿಸುತ್ತೇವೆ. ಇದರಿಂದಾಗಿ ಈ ಖಾಸಗಿ ಮೆಸೇಜ್‌ಗಳನ್ನು WhatsApp ಆಗಲೀ ಅಥವಾ Facebook ಆಗಲೀ ನೋಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಯಾರ್‍ಯಾರೊಂದಿಗೆ ಮೆಸೇಜ್ ವಿನಿಮಯ ಮಾಡುತ್ತಾರೆ ಅಥವಾ ಕರೆ ಮಾಡುತ್ತಾರೆ ಎಂಬ ವಿವರವನ್ನು ನಾವು ಹೊಂದಿರುವುದಿಲ್ಲ ಹಾಗೂ ನೀವು ಶೇರ್ ಮಾಡಿದ ಲೊಕೇಶನ್‌ಗಳನ್ನು ನಮಗೆ ನೋಡಲು ಸಾಧ್ಯವಿಲ್ಲ. ಆದ್ದರಿಂದ ನಾವು ಇವುಗಳನ್ನು Facebook ಜೊತೆ ಶೇರ್ ಮಾಡಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡುವುದೂ ಇಲ್ಲ. ಸೇವೆಯನ್ನು ಒದಗಿಸಲು ನಮಗೆ ನಿಮ್ಮ ಕಾಂಟ್ಯಾಕ್ಟ್‌ಗಳ ಅಗತ್ಯವಿದೆ. ಆದರೆ ನಿಮ್ಮ ಕಾಂಟ್ಯಾಕ್ಟ್‌ಗಳನ್ನು Facebook ಜೊತೆ ಶೇರ್ ಮಾಡಿಕೊಳ್ಳುವುದಿಲ್ಲ. ಈ ಕೆಲವು ಇತಿಮಿತಿಗಳ ಬಗ್ಗೆ ನೀವು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.