ಜಾರಿಗೆ ಬಂದ ದಿನಾಂಕದ ಬಗ್ಗೆ

ಜಾರಿಗೆ ಬಂದಾಗ ಏನಾಗುತ್ತದೆ?
ಮೇ 15 ರಂದು ಈ ಅಪ್‌ಡೇಟ್‌ ಜಾರಿಗೆ ಬಂದಾಗ ಯಾರ ಖಾತೆಯನ್ನೂ ಅಳಿಸುವುದಿಲ್ಲ ಅಥವಾ ಯಾರೂ WhatsApp ಸೌಲಭ್ಯಗಳನ್ನು ಕಳೆದುಕೊಳ್ಳುವುದಿಲ್ಲ.
ಜಾರಿಯಾದ ನಂತರ ಏನಾಗುತ್ತದೆ?
ಈ ಅಪ್‍ಡೇಟ್ ಅನ್ನು ನೋಡಿದ ಹೆಚ್ಚಿನ ಬಳಕೆದಾರರು ಇದನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, WhatsApp ನಲ್ಲಿ ನೊಟಿಫಿಕೇಶನ್ ಅನ್ನು ಡಿಸ್‌ಪ್ಲೇ ಮಾಡುವುದನ್ನು ಮುಂದುವರಿಸುತ್ತೇವೆ. ಈ ನೊಟಿಫಿಕೇಶನ್‌ನಲ್ಲಿ ಅಪ್‌ಡೇಟ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತೇವೆ ಮತ್ತು ರಿವ್ಯೂ ಮಾಡದ ಹಾಗೂ ಒಪ್ಪಿಗೆ ನೀಡದವರಿಗೆ ರಿವ್ಯೂ ಮಾಡಿ ಒಪ್ಪಿಗೆ ನೀಡಿ ಎಂದು ನೆನಪಿಸುತ್ತೇವೆ. ಈ ಜ್ಞಾಪನೆಯನ್ನು ಪದೇ ಪದೇ ಕಳುಹಿಸುತ್ತಿರಲು ಮತ್ತು ಆ್ಯಪ್‌ನ ಕಾರ್ಯಕ್ಷಮತೆಯನ್ನು ಸೀಮಿತಗೊಳಿಸಲು ನಾವು ಯಾವುದೇ ಯೋಜನೆಗಳನ್ನು ಪ್ರಸ್ತುತ ಹಾಕಿಕೊಂಡಿಲ್ಲ.
ಅಪ್‌ಡೇಟ್‌ಗಳನ್ನು ಸಮ್ಮತಿಸದವರಿಗಾಗಿ ಆ್ಯಪ್‌ನಲ್ಲಿಯೇ ನೇರವಾಗಿ ಸಮ್ಮತಿಸಲು ಇತರ ಅವಕಾಶಗಳಿವೆ. ಉದಾಹರಣೆಗೆ, WhatsApp ನಲ್ಲಿ ಪುನಃ ರಿಜಿಸ್ಟರ್‌ ಮಾಡಿದಾಗ ಅಥವಾ ಈ ಅಪ್‌ಡೇಟ್‌ಗೆ ಸಂಬಂಧಿಸಿದ ಫೀಚರ್‌ ಅನ್ನು ಮೊದಲ ಬಾರಿಗೆ ಬಳಸಲು ಬಯಸಿದರೆ ಆ್ಯಪ್‌ನಲ್ಲಿಯೇ ನೇರವಾಗಿ ಸಮ್ಮತಿಸಲು ಇತರ ಅವಕಾಶಗಳಿವೆ.
ನಿಮ್ಮ ಹಳೆಯ ಚಾಟ್ ಅನ್ನು ನೀವು Android ಅಥವಾ iPhone ಗೆ ಎಕ್ಸ್‌ಪೋರ್ಟ್ ಮಾಡಿಕೊಳ್ಳಬಹುದು ಮತ್ತು ನಿಮ್ಮ ಖಾತೆಯ ವರದಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
  • ನಿಮ್ಮ ಚಾಟ್‌ಗಳನ್ನು ನೀವು ಎಕ್ಸ್‌ಪೋರ್ಟ್ ಮಾಡಬಹುದು ಮತ್ತು ನಿಮ್ಮದೇ ಖಾತೆಯ ವರದಿಯನ್ನು ಸ್ವತಃ ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಮ್ಮ ಖಾತೆಯ ವರದಿಯನ್ನು ಡೌನ್‌ಲೋಡ್ ಮಾಡಲು ಅಥವಾ ನಿಮ್ಮ ಖಾತೆಯನ್ನು ಅಳಿಸಲು ನಿಮಗೆ ಸಹಾಯ ಬೇಕಾದಲ್ಲಿ, ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು.
ನೀವು ಅಪ್‌ಡೇಟ್ ಅನ್ನು ಸಮ್ಮತಿಸದಿದ್ದರೆ, WhatsApp ನಿಮ್ಮ ಖಾತೆಯನ್ನು ಅಳಿಸುವುದಿಲ್ಲ.
  • ನಿಷ್ಕ್ರಿಯ ಬಳಕೆದಾರರಿಗೆ ಸಂಬಂಧಿಸಿದಂತೆ, ನಮ್ಮ ಅಸ್ತಿತ್ವದಲ್ಲಿರುವ ನೀತಿ ಅನ್ವಯಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.
  • Android, iPhone ಅಥವಾ KaiOS ನಲ್ಲಿ ನಿಮ್ಮ ಖಾತೆಯನ್ನು ಅಳಿಸಲು ನೀವು ಬಯಸಿದರೆ, ನಿಮ್ಮ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸುತ್ತೀರಿ ಎಂದು ನಾವು ಭಾವಿಸುತ್ತೇವೆ. ನಿಮ್ಮ ಖಾತೆಯನ್ನು ಅಳಿಸುವುದರಿಂದ, ಇದು ನಿಮ್ಮ ಹಳೆಯ ಮೆಸೇಜ್‌ಗಳನ್ನು ಅಳಿಸುತ್ತದೆ, ನಿಮ್ಮನ್ನು ಎಲ್ಲಾ WhatsApp ಗ್ರೂಪ್‌ಗಳಿಂದ ತೆಗೆದುಹಾಕುತ್ತದೆ ಮತ್ತು ನಿಮ್ಮ WhatsApp ಬ್ಯಾಕಪ್‌ಗಳನ್ನು ಅಳಿಸುತ್ತದೆ. ಇದನ್ನು ನಾವು ಮರಳಿಸಲು ಸಾಧ್ಯವಾಗದು.
ಇದು ನಿಮ್ಮ ಪ್ರಶ್ನೆಗೆ ಉತ್ತರಿಸುತ್ತದೆಯೇ?
ಹೌದು
ಇಲ್ಲ